ಸುರಭಿ ಸಂಸ್ಥೆಗೆ ಸುಸ್ವಾಗತ

ಪ್ರಾರಂಭಿಸಿ

Number of clients: Got services from the organization

11955

Children

85

Adults

5964

Addicts

7303

Women

271

Senior Citizen

812

Physically Challenged


ಸುರಭಿ ಸಂಸ್ಥೆಯ ಕೇಂದ್ರಗಳು

ಸುರಭಿ ಸಂಸ್ಥೆಯು 2003 ರಿಂದ ಚಾಲನೆಯಲ್ಲಿದೆ, 25 ವರ್ಷಗಳಿಗಿಂತಲೂ ಹೆಚ್ಚು ಅನುಭವವನ್ನು ಹೊಂದಿದೆ.




ಹಿರಿಯ ನಾಗರೀಕರ ವೃದ್ಧಾಶ್ರಮ

ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶ. ಇಂದು ಸಾಮಾಜಿಕ ಸಂಬಂಧಗಳು ಹಾಗೂ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಯುವಕರು ತಂತ್ರಜ್ಞಾನ, ಹಣದ ದುರಾಸೆ ಹಾಗೂ ಸ್ವಾರ್ಥ ಪರ ಜೀವನದಿಂದ ಹಿರಿಯರೆಂದರೆ ಅನುತ್ಪಾದಕರು, ತಾಜ್ಯವಸ್ತುಗಳು ಹಾಗೂ ರಾತ್ರಿ ಕಾಲದ ತಂಗುದಾಣದ ಜೀವಿಗಳೆಂದು ಭಾವಿಸಿ ಅವರ ಆಸೆ, ಆಕಾಂಕ್ಷೆ, ಮೂಲಭೂತ ಅಗತ್ಯತೆಗಳ ಮತ್ತು ಭಾವನೆಗಳಿಗೆ ಬೆಲೆ ಕೊಡದೆ ವೃದ್ಧಾಶ್ರಮಕ್ಕೆ ತಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಇಂತಹ ಹಿರಿಯರು ಮಾಹಿತಿಯ ಬಂಡಾರ ಹಾಗೂ ಕುಟುಂಬದ ಆಸ್ತಿ ಮತ್ತು ವಿಶ್ವಕೋಶ. ಇವರ ಜೀವಕ್ಕೆ ವರ್ಷಗಳು ತುಂಬಿವೆ. ಆದರೆ ಇವರ ವರ್ಷಗಳಿಗೆ ಜೀವ ತುಂಬುವ ಕೆಲಸವನ್ನು ಒಂದು ಸವಾಲೆಂದೇ ಭಾವಿಸಿ ಮಾನವೀಯತೆ ಹಣತೆಯಂತೆ ಕಾರ್ಯನಿರ್ವಹಿಸುವ ಕೇಂದ್ರವೇ ”ವೃದ್ಧಾಶ್ರಮ”’.

ಗುರಿ ಮತ್ತು ಉದ್ದೇಶಗಳು :
  • ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಹಿರಿಯ ನಾಗರೀಕರನ್ನು ಪತ್ತೆ ಮಾಡಿ ದಾಖಲು ಮಾಡಿಕೊಳ್ಳುವುದು.
  • ಇಂದು ನಾ ನಿನಗಾದರೆ, ನೀ ನನಗೆ ಎಂಬ ಭಾವನೆ ದೂರ ಸರಿದು, ನಾವೆಲ್ಲರೂ ಒಂದು ಕುಟುಂಬದವರು ಎಂಬ ಪರಿಕಲ್ಪನೆ ಮೂಡಿಸುವುದು.
  • ಅಪ್ಪನ ಸ್ವತ್ತು ಬೇಕು, ಆದರೆ ಸಂಸ್ಕಾರ ಬೇಡ ಎನ್ನುವ ಮನೋಧರ್ಮಕ್ಕೆ ಹಣವಿದ್ದರೇ ಜಗತ್ತಿನಲ್ಲಿ ಎಲ್ಲ ಸಿಗುತ್ತದೆ ಎಂದು ಭಾವಿಸುವ ಮಕ್ಕಳಿಗೆ ತಂದೆ, ತಾಯಿಗಳು ಸಿಗುವುದು ಕಷ್ಟ ಎಂಬ ಸಂದೇಶ ಸಾರುವುದು.
  • ದಿನನಿತ್ಯದ ಜೀವನದಲ್ಲಿ ಸ್ವತಂತ್ರರಾಗಿರುವಂತೆ ನೋಡಿಕೊಳ್ಳುವುದು.
  • ದೃಢನಿರ್ಧಾರ, ಚೈತನ್ಯ ತುಂಬುವುದು, ಪ್ರಭುತ್ವ ನಾಗರೀಕರನ್ನಾಗಿ ಮಾಡುವುದು.
  • ಪಾಲನೆ ಪೋಷಣೆ ಹಾಗೂ ರಕ್ಷಣೆ ನೀಡುವುದು.

ಶ್ರೀ ಸುರಭೀ ವ್ಯಸನ ಮುಕ್ತಿ ಕೇಂದ್ರ

ಶ್ರೀ ಸುರಭೀ ವ್ಯಸನ ಮುಕ್ತಿ ಕೇಂದ್ರವು ಒಂದು ಉತ್ತಮವಾದ ಸಂಸ್ಥೆಯಾಗಿದೆ. ಈ ಸಂಸ್ಥೆಯು ಕೈಗೊಂಡ ಕಾರ್ಯವು ಶ್ಲಾಘನೀಯ. ಈ ಸಂಸ್ಥೆಯು ವ್ಯಸನಕ್ಕೆ ಬಲಿಯಾದವರನ್ನು ಪುನರ್ ವಸತಿಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು ಒಂದು ಖುಷಿಯಾದ ವಿಚಾರ. ಇಂದಿನ ಅದೆಷ್ಟೊ ಕುಟುಂಬಗಳು ಬೀದಿಪಾಲಾಗಿವುದನ್ನು ಈ ಸಂಸ್ಥೆಯು ತಡೆಗಟ್ಟುತ್ತಿದೆ. ಹಲವಾರು ವರ್ಷಗಳಿಂದ ಸಮಾಜದಲ್ಲಿನ ವ್ಯಸನಿಗಳನ್ನು ವ್ಯಸನ ಮುಕ್ತರನ್ನಾಗಿ ಪರಿವರ್ತಿಸಿ ಸಮಾಜಕ್ಕೆ ಅವರನ್ನು ಪುನರ್ ವಸತಿಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ. ಕಾರವಾರ ನಗರಸಭೆಯ ಅದ್ಯಕ್ಷನಾದ ನಾನು ಈ ಸಂಸ್ಥೆಗೆ ಭೇಟಿನಿಡಿದಾಗ, ಸಂಸ್ಥೆಯ ಕಾರ್ಯವೈಖರಿ, ಸಂಸ್ಥೆಯಲ್ಲಿನ ಸ್ವಚ್ಛೆತೆ ಹಾಗು ಸಿಬ್ಬಂದಿ ವರ್ಗದ ನಡವಳಿಕೆ, ವಿಶೇಷ ಕೊಠಡಿಗಳು, ಅಮಲು ರೋಗಿಗಳು ಇರುವ ವ್ಯವಸ್ಥೆ ಅವರಿಗೆ ಇಲ್ಲಿ ಸಿಗುವಂತಹ ಸೌಲಭ್ಯಗಳು ಉತ್ತಮವಾಗಿವೆ. ಸಮಾಜವನ್ನು ವ್ಯಸನ ಮುಕ್ತ ಸಮಾಜವನ್ನಾಗಿ ಪರಿವರ್ತಿಸುವ ಇವರ ಕಾರ್ಯಕ್ಕೆ ನಮ್ಮ ಸಹಾಯ ಸಹಕಾರ ಸದಾ ಇರುತ್ತದೆ. ಸಮಾಜದ ಒಳಿತಿಗಾಗಿ ಇಂತಹ ಕೇಲಸ ಕಾರ್ಯಗಳು ಅತ್ಯಗತ್ಯವಾಗಿದೆ ಎಂದು ಹೇಳಬಯಸುತ್ತೆನೆ.

>

Our Services

ಹಿರಿಯ ನಾಗರೀಕರ ವೃದ್ಧಾಶ್ರಮ

. ಇಂದು ಸಾಮಾಜಿಕ ಸಂಬಂಧಗಳು ಹಾಗೂ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಯುವಕರು ತಂತ್ರಜ್ಞಾನ, ಹಣದ ದುರಾಸೆ ಹಾಗೂ ಸ್ವಾರ್ಥ ಪರ ಜೀವನದಿಂದ ಹಿರಿಯರೆಂದರೆ ಅನುತ್ಪಾದಕರು, ತಾಜ್ಯವಸ್ತುಗಳು ಹಾಗೂ ರಾತ್ರಿ ಕಾಲದ ತಂಗುದಾಣದ ಜೀವಿಗಳೆಂದು ಭಾವಿಸಿ ಅವರ ಆಸೆ, ಆಕಾಂಕ್ಷೆ, ಮೂಲಭೂತ ಅಗತ್ಯತೆಗಳ ಮತ್ತು ಭಾವನೆಗಳಿಗೆ ಬೆಲೆ ಕೊಡದೆ ವೃದ್ಧಾಶ್ರಮಕ್ಕೆ ತಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಇಂತಹ ಹಿರಿಯರು ಮಾಹಿತಿಯ ಬಂಡಾರ ಹಾಗೂ ಕುಟುಂಬದ ಆಸ್ತಿ ಮತ್ತು ವಿಶ್ವಕೋಶ. ಇವರ ಜೀವಕ್ಕೆ ವರ್ಷಗಳು ತುಂಬಿವೆ. ಆದರೆ ಇವರ ವರ್ಷಗಳಿಗೆ ಜೀವ ತುಂಬುವ ಕೆಲಸವನ್ನು ಒಂದು ಸವಾಲೆಂದೇ ಭಾವಿಸಿ ಮಾನವೀಯತೆ ಹಣತೆಯಂತೆ ಕಾರ್ಯನಿರ್ವಹಿಸುವ ಕೇಂದ್ರವೇ ”ವೃದ್ಧಾಶ್ರಮ”’.

ಸಮಗ್ರ ಮಕ್ಕಳ ರಕ್ಷಣಾ ಯೋಜನೆ

06 ರಿಂದ 18 ವರ್ಷ ವಯೋಮಾನದ ಶಾಲೆ ಬಿಟ್ಟು ಬೀದಿ ಸುತ್ತುವ ಮಕ್ಕಳು, ಭಿಕ್ಷೆ ಬೇಡುವ ಮಕ್ಕಳು, ದುಡಿಯುವ ಮಕ್ಕಳು, ಚಿಂದಿ ಆಯುವ ಮಕ್ಕಳು, ದೊಂಬರಾಟದ ಮಕ್ಕಳು, ಅಲೆಮಾರಿಗಳು, ಅನಾಥಮಕ್ಕಳು, ವಲಸೆ/ಗುಳೆ ಹೋದ ಮಕ್ಕಳು ವ್ಯಸನಕ್ಕೆ ಮತ್ತು ಇತರ ಶೋಷಣೆಗೆ ಒಳಗಾದ ಮಕ್ಕಳ ಪಾಲನೆ, ಪೋಷಣೆ ಮತ್ತು ರಕ್ಷಣೆ ನೀಡಿ ಸಂವಿಧಾನಿಕ ಮೂಲಭೂತ ಹಕ್ಕುಗಳ ಜೋತೆಗೆ ಮಾನವ ಹಕ್ಕುಗಳನ್ನು ಒದಗಿಸಿ, ಕುಟುಂಬದಲ್ಲಿ ವಿಲೀನಗೊಳಿಸಿ, ಸಾಮಾನ್ಯರಂತೆ ಬದುಕು ರೂಪಿಸಿಕೊಡುವ ಯೋಜನೆಯ ಅಂಗ ಸಂಸ್ಥೆಯೇ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ತೆರೆದ ತಂಗುದಾಣ.



ಸ್ವಾಧಾರ ಗೃಹ ಯೋಜನೆ

ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಮಾನಸಿಕ ಕಿರುಕುಳ, ದೈಹಿಕ ಹಿಂಸೆ, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆ, ಅತ್ಯಾಚಾರ, ಲೈಂಗಿಕ ಕಿರುಕುಳ, ವಿವಾಹ ಪೂರ್ವ ಗರ್ಭಿಣಿಯರು, ವಿಧವೆಯರು, ನಿರಾಶ್ರಿತರು, ಸಮಸ್ಯೆಗಳನ್ನು ನಿಭಾಯಿಸಲು ಅಸಮರ್ಥರಾದ ನೊಂದ ಹೆಣ್ಣು ಮಕ್ಕಳ ಹಾಗೂ ಮಹಿಳೆಯರಿಗೆ ಭಾವನಾತ್ಮಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಸದೃಢತೆ ತುಂಬಿ, ಸ್ವಾವಲಂಬಿಗಳಾಗಿ ಬದುಕಲು ಮುಖ್ಯವಾಹಿನಿಗೆ ತರುವ ಉದ್ದೇಶಿತ ಕಾರ್ಯಕ್ರಮವೇ ಸ್ವಾಧಾರ ಗೃಹ ಯೋಜನೆ’




ಉಜ್ವಲ ಯೋಜನೆ

ಇಂದು ಮಾನವೀಯ ಮೌಲ್ಯಗಳು ನಶಿಸಿ ಮಾರುಕಟ್ಟೆಯ ಮೌಲ್ಯಕ್ಕೆ ಹವಣಿಸುತಿರುವ ಸಮಾಜದಲ್ಲಿ ವಿಕೃತ ಮನಸ್ಸಿನ ಮತ್ತು ಸ್ವಾರ್ಥಪರ ಲಾಲಸೆಗೆ ಮಹಿಳೆಯರು ಮತ್ತು ಮಕ್ಕಳನ್ನು ಅನೈತಿಕವಾಗಿ ಸಾಗಾಣಿಕೆ ಮೂಲಕ ಅತ್ಯಾಚಾರ, ಮಾನಸಿಕ ಹಿಂಸೆ, ದೈಹಿಕ ದಂಡನೆ ಹಾಗೂ ವಿವಿಧ ಕೆಳಮಟ್ಟದ ವೃತ್ತಿ ಹಾಗೂ ಪ್ರವೃತ್ತಿಗೆ ತೊಡಗಿಸಿ ಹಣಗಳಿಸಲು ಮಾಡುವ ದೌರ್ಜನ್ಯವನ್ನು ತಡೆದು ಸಾಗಾಣೆಯಿಂದ ರಕ್ಷಿಸಲ್ಪಟ್ಟ ಮಹಿಳೆ / ಮಕ್ಕಳ ಸಮಸ್ಯೆ ಇತ್ಯರ್ಥವಾಗುವವರೆಗೂ ಅವರಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ತಾತ್ಕಾಲಿಕ ರಕ್ಷಣೆ ಮತ್ತು ಆಶ್ರಯ ನೀಡಿ ಅವರ ಹಕ್ಕುಗಳನ್ನು ಗೌರವಿಸಿ ರಕ್ಷಿಸುವ ಮಹತ್ಕಾರ್ಯದ ಜೊತೆಗೆ ಮಹಿಳೆ / ಮಕ್ಕಳ ಪುನರ್ವಸತಿ ಕಾರ್ಯವನ್ನು ಅನುಷ್ಠಾನಗೊಳಿಸುವ ಯೋಜನೆಯೇ ಉಜ್ವಲ ಯೋಜನೆ’’.

ಸಮಗ್ರ ವ್ಯಸನಮುಕ್ತ ಹಾಗೂ ಪುನರ್ವಸತಿ ಕೇಂದ್ರ

84 ಲಕ್ಷ ಜೀವರಾಶಿಗಳಲ್ಲಿ ಸುಜ್ಞಾನ ಮತ್ತು ವಿವೇಕ ಹೊಂದಿರುವ ಮಾನವ ಇಂದು ಮಾದಕ ವಸ್ತುಗಳ ಸೇವನೆ, ಧೂಮಪಾನ ಹಾಗೂ ಮಧ್ಯಪಾನ ಸೇವನೆಯು ಫ್ಯಾಷನ್, ಅಂತಸ್ತು ಹಾಗೂ ಪ್ರತಿಷ್ಠೆಯೆಂದು ಭಾವಿಸಿ ತಮ್ಮ ಜೀವನ ಮತ್ತು ಜೀವವನ್ನು ನಶ್ವರವಾಗಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ನೈತಿಕವಾಗಿ ಅಧಃಪತನದ ಕಡೆಗೆ ಸಾಗುವ ನಾಗರೀಕರಿಗೆ, ವಿಶೇಷವಾಗಿ ಯುವಕರಿಗೆ ಸದರಿ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಆರೋಗ್ಯಕರ ಮಾಹಿತಿ ಮತ್ತು ಮಾರ್ಗದರ್ಶನ ನೀಡಿ, ಆಪ್ತ ಸಮಾಲೋಚನೆ ಮೂಲಕ ಸುಂದರ ಬದುಕನ್ನು ರೂಪಿಸಿಕೊಳ್ಳಲು ಜಾಗೃತಿ ಮೂಡಿಸಿ ಕುಟುಂಬದೊಂದಿಗೆ ವಿಲೀನಗೊಳಿಸುವ ಕಾರ್ಯಕ್ರಮದ ಅಂಗಸಂಸ್ಥೆಯೇ “ಸಮಗ್ರ ವ್ಯಸನಿಗಳ ಪುನರ್ವಸತಿ ಕೇಂದ್ರ.“

ಅಂಗವಿಕಲರ ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯ

ಎಲ್ಲಿ ಹುಟ್ಟಿದೆ ಅಲ್ಲಿ ಸಾವು ಇದ್ದೇಇದೆ. ಹೊರಗಿನ ಶಕ್ತಿ ರೂಪವೇ ದೇವರು. ಈ ಸಮಾಜದಲ್ಲಿ ಸೃಷ್ಟಿಯ ವೈಫಲ್ಯದಿಂದಾಗುವ ನೂನ್ಯತೆ, ವಿಕಲತೆ, ಹಾಗೂ ಅಂಗವಿಕಲತೆಗೆ ಆಂತರಿಕ ಮತ್ತು ಬಾಹ್ಯ ಕಾರಣಗಳನೇಕ. ತನ್ನ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡವರಂತೆ ಖಿನ್ನತೆಗೆ ಒಳಗಾಗಿ ನೋವನ್ನು ಅನುಭವಿಸುತ್ತಿರುವಂತಹ ವ್ಯಕ್ತಿಗಳಿಗೆ ಆತ್ಮವಿಶ್ವಾಸ ತುಂಬಿ ಸಮಾಜಮುಖಿ ಚಿಂತನೆಗಳ ಮೂಲಕ ಸ್ವಾವಲಂಭಿ ಬದುಕು ಕಟ್ಟಿಕೊಟ್ಟು ತನ್ನ ವರ್ತಮಾನವನ್ನು ಅರ್ಥೈಸಿಕೊಂಡು ಸಮಾಜದಲ್ಲಿ ಸಂಯೋಜಿತ ಬದುಕನ್ನು ಕಲ್ಪಿಸಿಕೊಡುವ ಯೋಜನೆಯ ಅಂಗ ಸಂಸ್ಥೆಯೇ “ಅಂಗವಿಕಲರ ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯ”’.