ವೃದ್ದಾಶ್ರಮ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ, ಸಮಗ್ರ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರ

ಗುರಿ ಮತ್ತು ಉದ್ದೇಶಗಳು :

  • ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಹಿರಿಯ ನಾಗರೀಕರನ್ನು ಪತ್ತೆ ಮಾಡಿ ದಾಖಲು ಮಾಡಿಕೊಳ್ಳುವುದು.
  • ಮಕ್ಕಳ ವಯಸ್ಸಿಗೆ ಅನುಗುಣವಾಗಿ, ವೃತ್ತಿ ತರಬೇತಿ, ಮನರಂಜನೆ, ಸೇತುಬಂಧ ಶಿಕ್ಷಣ ಒದಗಿಸುವುದು..
  • ಮಧ್ಯವರ್ಜನ ಶಿಬಿರಗಳ ಮೂಲಕ ವ್ಯಸನಿಗಳ ಮನಪರಿವರ್ತನೆ ಮಾಡುವುದು.
  • ಮೂಲಭೂತ ಸೌಕರ್ಯಗಳಾದ ತಾತ್ಕಾಲಿಕ ಆಶ್ರಯ, ಊಟ ಮತ್ತು ವಸತಿ.
  • ದೃಢನಿರ್ಧಾರ, ಚೈತನ್ಯ ತುಂಬುವುದು, ಪ್ರಭುತ್ವ ನಾಗರೀಕರನ್ನಾಗಿ ಮಾಡುವುದು.
  • ಪಾಲನೆ ಪೋಷಣೆ ಹಾಗೂ ರಕ್ಷಣೆ ನೀಡುವುದು.

ಶ್ರೀ ಸುರಭೀ ವ್ಯಸನ ಮುಕ್ತಿ ಕೇಂದ್ರ

ಶ್ರೀ ಸುರಭೀ ವ್ಯಸನ ಮುಕ್ತಿ ಕೇಂದ್ರವು ಒಂದು ಉತ್ತಮವಾದ ಸಂಸ್ಥೆಯಾಗಿದೆ. ಈ ಸಂಸ್ಥೆಯು ಕೈಗೊಂಡ ಕಾರ್ಯವು ಶ್ಲಾಘನೀಯ. ಈ ಸಂಸ್ಥೆಯು ವ್ಯಸನಕ್ಕೆ ಬಲಿಯಾದವರನ್ನು ಪುನರ್ ವಸತಿಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು ಒಂದು ಖುಷಿಯಾದ ವಿಚಾರ. ಇಂದಿನ ಅದೆಷ್ಟೊ ಕುಟುಂಬಗಳು ಬೀದಿಪಾಲಾಗಿವುದನ್ನು ಈ ಸಂಸ್ಥೆಯು ತಡೆಗಟ್ಟುತ್ತಿದೆ. ಹಲವಾರು ವರ್ಷಗಳಿಂದ ಸಮಾಜದಲ್ಲಿನ ವ್ಯಸನಿಗಳನ್ನು ವ್ಯಸನ ಮುಕ್ತರನ್ನಾಗಿ ಪರಿವರ್ತಿಸಿ ಸಮಾಜಕ್ಕೆ ಅವರನ್ನು ಪುನರ್ ವಸತಿಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ. ಕಾರವಾರ ನಗರಸಭೆಯ ಅದ್ಯಕ್ಷನಾದ ನಾನು ಈ ಸಂಸ್ಥೆಗೆ ಭೇಟಿನಿಡಿದಾಗ, ಸಂಸ್ಥೆಯ ಕಾರ್ಯವೈಖರಿ, ಸಂಸ್ಥೆಯಲ್ಲಿನ ಸ್ವಚ್ಛೆತೆ ಹಾಗು ಸಿಬ್ಬಂದಿ ವರ್ಗದ ನಡವಳಿಕೆ, ವಿಶೇಷ ಕೊಠಡಿಗಳು, ಅಮಲು ರೋಗಿಗಳು ಇರುವ ವ್ಯವಸ್ಥೆ ಅವರಿಗೆ ಇಲ್ಲಿ ಸಿಗುವಂತಹ ಸೌಲಭ್ಯಗಳು ಉತ್ತಮವಾಗಿವೆ. ಸಮಾಜವನ್ನು ವ್ಯಸನ ಮುಕ್ತ ಸಮಾಜವನ್ನಾಗಿ ಪರಿವರ್ತಿಸುವ ಇವರ ಕಾರ್ಯಕ್ಕೆ ನಮ್ಮ ಸಹಾಯ ಸಹಕಾರ ಸದಾ ಇರುತ್ತದೆ. ಸಮಾಜದ ಒಳಿತಿಗಾಗಿ ಇಂತಹ ಕೇಲಸ ಕಾರ್ಯಗಳು ಅತ್ಯಗತ್ಯವಾಗಿದೆ ಎಂದು ಹೇಳಬಯಸುತ್ತೆನೆ.

ಸಮಗ್ರ ಮಕ್ಕಳ ರಕ್ಷಣಾ ಯೋಜನೆ - ತೆರೆದ ತಂಗುದಾಣ

ಭಾರತ ದೇಶದ ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗ ಮಕ್ಕಳಿದ್ದಾರೆ. ಶೇಕಡ 60 ಭಾಗ ಯುವಕÀರು ಇರುವ ದೇಶದ ದೊಡ್ಡ ಸಂಪತ್ತೇ ಮಕ್ಕಳು. ಇಂದಿನ ಮಕ್ಕಳೇ ಇಂದಿನ ಪ್ರಜೆಗಳು, ಪ್ರಭುಗಳು. 06 ರಿಂದ 18 ವರ್ಷ ವಯೋಮಾನದ ಶಾಲೆ ಬಿಟ್ಟು ಬೀದಿ ಸುತ್ತುವ ಮಕ್ಕಳು, ಭಿಕ್ಷೆ ಬೇಡುವ ಮಕ್ಕಳು, ದುಡಿಯುವ ಮಕ್ಕಳು, ಚಿಂದಿ ಆಯುವ ಮಕ್ಕಳು, ದೊಂಬರಾಟದ ಮಕ್ಕಳು, ಅಲೆಮಾರಿಗಳು, ಅನಾಥಮಕ್ಕಳು, ವಲಸೆ/ಗುಳೆ ಹೋದ ಮಕ್ಕಳು ವ್ಯಸನಕ್ಕೆ ಮತ್ತು ಇತರ ಶೋಷಣೆಗೆ ಒಳಗಾದ ಮಕ್ಕಳ ಪಾಲನೆ, ಪೋಷಣೆ ಮತ್ತು ರಕ್ಷಣೆ ನೀಡಿ ಸಂವಿಧಾನಿಕ ಮೂಲಭೂತ ಹಕ್ಕುಗಳ ಜೋತೆಗೆ ಮಾನವ ಹಕ್ಕುಗಳನ್ನು ಒದಗಿಸಿ, ಕುಟುಂಬದಲ್ಲಿ ವಿಲೀನಗೊಳಿಸಿ, ಸಾಮಾನ್ಯರಂತೆ ಬದುಕು ರೂಪಿಸಿಕೊಡುವ ಯೋಜನೆಯ ಅಂಗ ಸಂಸ್ಥೆಯೇ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ತೆರೆದ ತಂಗುದಾಣ.

ರಾಜೀವ್ ಗಾಂಧಿ ಶಿಶುಪಾಲನಾ ಕೇಂದ್ರ:

ಆಧುನಿಕ ಯುಗದಲ್ಲಿ ಸಾಮಾಜಿಕ ಸಮಸ್ಯೆಗಳು, ಸವಾಲುಗಳು ಹಾಗೂ ಕೌಟುಂಬಿಕ ತಲ್ಲಣಗಳು ದಿನೇ ದಿನೇ ಹೆಚ್ಚುತ್ತಾ ನಗರಗಳಲ್ಲಿನ ಕೊಳಚೆ ಪ್ರದೇಶಗಳಲ್ಲಿ ಜೀವನ ನಡೆಸುವ ಕುಟುಂಬಗಳ ತಾಯಂದಿರು ತಮ್ಮ ಕುಟುಂಬದ ನಿರ್ವಹಣೆಗಾಗಿ ಹೊರಗಿನ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುವವರೆಗೆ 0-3 ವರ್ಷ ವಯಸ್ಸಿನ ಮಕ್ಕಳನ್ನು ಒಂದು ನಿರ್ದಿಷ್ಠ ಕೇಂದ್ರದಲ್ಲಿ ಬಿಟ್ಟು ಹೋದ ಅವಧಿಯಲ್ಲಿ ಮಕ್ಕಳ ಪಾಲನೆ, ಪೋಷಣೆ ಹಾಗೂ ರಕ್ಷಣೆ ಕಾರ್ಯದ ಜವಾಬ್ದಾರಿಯನ್ನು ನಿರ್ವಹಿಸುವ ಸಂಸ್ಥೆಯೇ“”ರಾಜೀವ್ ಗಾಂಧಿ ಶಿಶುಪಾಲನ ಕೇಂದ್ರ”’’.

Certification


Certificate under section 12AA of IT ACT

Copy of 80G of IT act 1961

PAN CARD

Registration Certificate