ಅಣಬೆ ಕೃಷಿ ( ಬೇಸಾಯ):- 2004
ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಆದಾಯ ತಂದುಕೊಡುವ ಅಣಭೆ ಬೇಸಾಯ ಮಾಡುವುದರ ಬಗ್ಗೆ ತರಬೇತಿ ನೀಡುವ ನಿಟ್ಟಿನಲ್ಲಿ ಕಪಾರ್ಟ ಸಹಯೋಗದೂಂದಿಗೆ ಅಣಬೆ ಕೃಷಿ ತರಬೇತಿ ಯೋಜನೆಯನ್ನು ದಾವಣಗೆರೆ ಜಿಲ್ಲೆಯ ದೊಡ್ಡಬಾತಿಯಲ್ಲಿ 2004 ರಲ್ಲಿ ಪ್ರಾರಂಭಿಸಲಾಯಿತು. ದಾವಣಗೆರೆ ಜಿಲ್ಲೆಯಲ್ಲಿ ಬರುವ ಸ್ವ ಸಹಾಯ ಸಂಘದ ಆಸಕ್ತಿ ಇರುವ ಮಹಿಳೆಯರನ್ನು ಗುರುತಿಸಿ ಅಂತಹ ಮಹಿಳೆಯರಿಗೆ ಅಣಬೆ ಉತ್ಪನ್ನ ಗಳಿಂದಸಿಗುವ ಲಾಭಾಂಶದ ಮಾರ್ಗಗಳನ್ನು ತಿಳಿಸುವ ಮೂಲಕ ಅತ್ಯಂತ ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಆದಾಯಗಳಿಸುವುದು ಅಣಬೆ ಕೃಷಿ ಮಹಿಳೆಯರಿಗೆ ಒಂದು ಸ್ವ ಉದ್ಯೋಗವನ್ನಾಗಿಸುವುದು ಈ ಯೋಜನೆಯ ಮುಖ್ಯ ಉದ್ದೇ±.À ಸ್ವ ಸಹಾಯ ಸಂಘದಲ್ಲಿ ಆಸಕ್ತಿದಾಯಕ ಮಹಿಳೆಯರಿಗೆ ಅಣಬೆ ಕೃಷಿ ತರಬೇತಿ ನೀಡಿ ಅದರ ಆದಾಯ ಹೆಚ್ಚೀಸುವಲ್ಲಿ ಈ ಯೋಜನೆ ತನ್ನ ಗುರಿತಲುಪಿದ್ದು ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಯೋಜನೆಯ ಸೌಲಭ್ಯವನ್ನು 60 ಜನ ಫಲಾನುಭವಿಗಳು ತೆಗೆದುಕೊಂಡಿದ್ದಾರೆ.
ದುಡಿಯುವ ಮಕ್ಕಳ ರಕ್ಷಣಾ ಕೇಂದ್ರ:-
2005-2016
ಕಡು ಬಡತನದಿಂದ ಹಾಗೂ ಪೋಷಕರು ದಿರ್ಘಖಾಯಿಲೆಗಳಿಂದ ಮತ್ತು ಮನೆಯ ಯಜಮಾನ ಅಕಾಲೀಕ ಮರಣ ಹೊಂದಿದಾಗ ಕೇವಲ ತಾಯಿ ಕೈಯಲ್ಲಿ ಕುಟುಂಬ ನಿರ್ವಹಿಸಲು ಅಸಾಧ್ಯ ವಾದ ಪರಿಸ್ಥಿತಿ ಕಂಡುಬಂದು ಇಲ್ಲಿ ತಾಯಿ ಒಬ್ಬಳೆ ದುಡಿಯದೆ ತಮ್ಮ ಎಳೆಯ ವಯಸ್ಸಿನ ಮಕ್ಕಳನ್ನು ಕಿರಾಣಿ ಅಂಗಡಿಗಳಲ್ಲಿ ಸೈಕಲ್ ಶಾಪ್ ಗಳಲ್ಲಿ ಮನೆ ಕಟ್ಟಲು ಸಹಾಯ ಕೆಲಸಕ್ಕಾಗಿ ಕಳುಹಿಸುವುದು ಕಂಡುಬಂದು ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ 2005ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು, ಈ ಯೋಜನೆಯ ಗುರಿ ಉದ್ದೇಶವನ್ನು ಗಮನದಲ್ಲಿ ಇಟ್ಟುಕೊಂಡು ಭದ್ರಾವತಿ, ಶಿವಮೊಗ್ಗ ,ಗದಗ, ಕಾರವಾರ,ಗಳಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪ್ರಾರಂಬಿಸಿತು. ಪ್ರತಿಯೊಂದು ಕೇದ್ರದಲ್ಲಿ 100 ಮಕ್ಕಳಿಗೆ ಸೇತುಬಂದ ಕಾರ್ಯಕ್ರಮ, ನೈತಿಕ ಶಿಕ್ಷಣ, ವೃತ್ತಿ ತರಬೇತಿ, ಅನೌಪಚಾರಿಕ ಶಿಕ್ಷಣವನ್ನು, ನೀಡಿ ಮಕ್ಕಳಿಗೆ ಆಪ್ತ ಸಮೂಲೋಚನೆಗೆ ಒಳಪಡಿಸಿ ಮಕ್ಕಳಿಗೆ ಆಟ ಮಧ್ಯಾಹ್ನನದ ಲಘು ಉಪಹಾರವನ್ನು ನೀಡಿ ಮಕ್ಕಳಿಗೆ ಪುನರ್ ವಸತಿ ಕಲ್ಪಿಸಿಕೊಟ್ಟೆವು. ಈ ಯೋಜನೆ ಅಡಿಯಲ್ಲಿ 1780 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡು 2016ರಲ್ಲಿ ಈ ಯೋಜನೆಯನ್ನು ಮುಕ್ತಾಯಗೊಳಿಸಲಾಯಿತು.
ಬೀದಿ ಮಕ್ಕಳ ಸಮಗ್ರ ಪುನರ್‍ವಸತಿ ಕಾರ್ಯಕ್ರಮ:-
ಸಾಮನ್ಯವಾಗಿ ಕೊಳಗೇರಿ ಪ್ರದೇಶಗಳಲ್ಲಿ ಅಕ್ಷರಸ್ಥರ ಪ್ರಮಾಣ ಕಡಿಮೆ ಇದ್ದು, ಶಿಕ್ಷಣದ ¨ಗ್ಗೆ ಅರಿವು ಇರುವುದಿಲ್ಲ ಅವರು ಕೇವಲ ಅನೌಪಚಾರಿಕ ಉದ್ಯೋಗಗಳನ್ನು ಆದರಿಸಿ ಜೀವನ ನಡೆÀಸುತ್ತೀರುವುದನ್ನು ಕಂಡುಬರುತ್ತದೆ, ಇದೆ ರೀತಿ ತಮ್ಮ ಮಕ್ಕಳಿಗೂ ಸಹ ಚಿಂದಿ ಅಯುವ ಕೆಲಸ, ಭೀಕ್ಷಾಟನೆ ಮಾಡುವ ಕೆಲಸ, ಹಾಗೂ ಇತರೆ ಅನೌಪಚಾರಿಕ ಕೆಲಸಕ್ಕೆ ಕಳಿಯಿಸುತ್ತಾರೆ. ಆದ್ದರಿಂದ ಅವರ ಮಕ್ಕಳಲ್ಲಿ ಶಿಕ್ಷಣದ ಅರಿವು ಮೂಡಿಸಲು ನಮ್ಮ ಸಂಸ್ಥೆಯು ಸಹಯೋಗದಲ್ಲಿ ಬೀದಿ ಮಕ್ಕಳ ಶಿಕ್ಷಣ ಯೋಜನೆಯನ್ನು 2005ರಲ್ಲಿ ಹುಬ್ಬಳ್ಲಿ ಮತ್ತು ಶಿವಮೊಗ್ಗದ ಕೊಳಗೆರಿ ಪ್ರದೇಶದಲ್ಲಿ ಪ್ರಾರಂಬಿಸಲಾಹಿತು. ಈ ಯೋಜನೆಯಲ್ಲಿ ಚಿಂದಿ ಅಯುವ ಮಕ್ಕಳು, ಭೀಕ್ಷಾಟನೆ ಮಾಡುವ ಮಕ್ಕಳು, ಹಾಗೂ ತಂದೆ ತಾಯಿ ಇಲ್ಲದೆ ಇರುವ ಮಕ್ಕಳಿಗೆ ಚಟುವಟಿಕೆಗಳಿಂದ ಔಪಚಾರಿಕ ಶಿಕ್ಷಣ ಪಡೆಯಲು ಸಹಾಯ ಮಾಡಿರುತ್ತೇವೆ. ಇದು ಕೇಂದ್ರ ಸರ್ಕಾರದ ಅನುದಾನಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮಂತ್ರಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸಿರುತ್ತೇವೆ. ಶಿವಮೊಗ್ಗದ ಕೊಳಗೇರಿ ಪ್ರದೇಶ. ದುರ್ಬಲ ಮತ್ತು ಅವಶ್ಯಕತೆ ಇರುವ ಸ್ಥಳಗಳಲ್ಲಿ 4 ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ಹಾಗೂ ಹುಬ್ಬಳ್ಳಿಯ ಕೊಳಚೆ ಪ್ರದೇಶದಲ್ಲಿ 75 ಸಂಖ್ಯೆ ತಲಾ 4 ಕೇಂದ್ರಗಳನ್ನು ಸ್ಥಾಪಿಸಿ ಕಾರ್ಯನಿರ್ವಹಣೆ ಮಾಡಿರುತ್ತೇವೆ. ಈ ಯೋಜನೆಯು 2009-10 ರಲ್ಲಿ ಮುಕ್ತಾಯಗೊಂಡಿರುತ್ತದೆ. ಒಟ್ಟಾರೆಯಾಗಿ ಈ ಯೋಜನೆಯ ಅಡಿ ಸುಮಾರು 2200 ಮಕ್ಕಳು ಪುನರ್ ವಸತಿ ಪಡೆದಿರುತ್ತಾರೆ.
Peer Lead Intervention - 2003-05
ಭಾರತ ದೇಶದಲ್ಲಿ ಅನಕ್ಷರಸ್ಥರು ಹೆಚ್ಚಾಗಿ ಇರುವುದರಿಂದ ಹಾಗೂ ಮಾದಕವಸ್ತು ಸೇವನೆ ಮಾಡಿ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಹೆಚ್ ಐ ವಿ / ಏಡ್ಸ್ ಹೆಚ್ಚಾಗಿರುವುದರಿಂದ ಮದ್ಯವ್ಯಸನ ಕೇಂದ್ರಗಳಲ್ಲಿ ಪೀರ್ ಲೀಡ್ ಕಾರ್ಯಕ್ರಮ ಯೋಜನೆಯು ಆರ್ ಆರ್ ಟಿ ಸಿ ಸಹಯೋಗದೊಂದಿಗೆ ಎಸ್ ಪಿ ವೈ ಎಮ್ ನ ಸಹಭಾಗಿತ್ವದ ಮೂಲಕ ಮಾದಕ ದ್ರವ್ಯ ಸೇವನೆ ಮಾಡುವ ಹಾಗೂ ಹೆಚ್ ಐ ವಿ / ಏಡ್ಸ್ ಹರಡುವುದನ್ನು ತಡೆಗಟ್ಟುವ ಗುರಿಯನ್ನು ಹೊಂದಿ ಸಮುದಾಯದಲ್ಲಿ ಮಾದಕ ವಸ್ತು ಸೇವನೆ ದುಷ್ಪರಿಣಾಮಗಳಿಗೆ ಆತ್ಮ ವಿಶ್ವಾಸ ತುಂಬಿ ಆತ್ಮ ಗೌರವತುಂಬಿ ಆರೋಗ್ಯದ ಕಡೆಗೆ ಒಯ್ಯುವುದು. ಹೆಚ್ ಐ ವಿ / ಏಡ್ಸ್ ಬಗ್ಗೆ ಜನ ಜಾಗೃತಿ ಮೂಡಿಸಿ ಸೂಜಿಯ ಮುಖಾಂತರ ಮಾದಕ ದ್ರವ್ಯವನ್ನು ಒಬ್ಬರಿಂದ ಮತ್ತೊಬ್ಬರಿಗೆ ಹೆಚ್ ಐ ವಿ ಹರಡುವುದನ್ನು ತಡೆಗಟ್ಟುವ ಬಗ್ಗೆ ತಿಳುವಳಿಕೆ ನೀಡಿ ಕಾರ್ಯಗಾರಗಳನ್ನು ಏರ್ಪಡಿಸಿ ಹೆಚ್ ಐ ವಿ ಹರಡುವ ಅಪಾÀಯವನ್ನು ತಡೆಗಟ್ಟುವಲ್ಲಿ ಈ ಯೋಜನೆ ಯಶಸ್ವಿಯಾಗಿದೆ ಈ ಯೋಜನೆಯಲ್ಲಿ ಸರಿ ಸುಮಾರು 2 ಜಿಲ್ಲೆಯಲ್ಲಿ ಸರಿ ಸುಮಾರು 500 ಹೆಚ್ಚು ಗುಂಪುಗಳನ್ನು ಮಾಡಿ ಸಮಾಜದಲ್ಲಿ ಜಾಗೃತಿ ಮೂಡಿಸಿರುತ್ತೇವೆ.
ತಾಯಿ ಮತ್ತು ಶಿಶುವಿನ ಆರೋಗ್ಯ ತರಬೇತಿ ಕೇಂದ್ರ:-
ಆಧುನಿಕ ಜಗತ್ತಿನಲ್ಲಿ ಮಾನವನ ಆರೋಗ್ಯ ತುಂಬಾ ಪ್ರಮುಖವಾದುದ್ದು. ಅದರಲ್ಲಿ ಗರ್ಭಿಣಿ ಸ್ತ್ರೀಯು ಸೂಷ್ಮವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ, ಕಾರಣ ತಾಯಿ ಮರಣ, ಶಿಶು ಮರಣ, ಹೆಚ್ಚಾಗಿರುವುದನ್ನು ಕಂಡು ಬಂದು ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿತು. ಈ ಯೋಜನೆಯ ಗುರಿ ಉದ್ದೇಶಗಳನ್ನು ತಿಳಿದುಕೊಂಡು ದಾವಣಗೆರೆ ಶಿವಮೊಗ್ಗ, ಬಳ್ಳಾರಿ, ಹಾಗೂ ಧಾರವಾಡ ಜಿಲ್ಲೆಗಳಲ್ಲಿ 2010ರಲ್ಲಿ ಪ್ರಾರಂಭಿಸಿತು. ಈ ಮೇಲಿನ ಜಿಲ್ಲೆಗೆ ಒಳಪಟ್ಟ ತಾಲ್ಲೂಕಿನ ಆಯ್ದ 4 ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆಯ್ದು ಕೊಂಡು ಅದರ ವ್ಯಾಪ್ತಿಯಲ್ಲಿ ಬರುವ ಗರ್ಭಿಣಿ ಸ್ತ್ರೀ ಯರಿಗೆ ಆಯೋಗ್ಯದ ಬಗ್ಗೆ ಮಹಿತಿ ನೀಡಿದೆವು ಈ ಯೋಜನೆಯ ಮುಖ್ಯ ಉದ್ದೇಶ ತಾಯಿ ಮರಣ ಮತ್ತು ಶಿಶು ಮರಣ ಕಡಿಮೆಗೋಳಿಸುವುದು ಸುಮಾರು 2 ವರ್ಷದಲ್ಲಿ 10000 ಗರ್ಭಿಣಿ ಮಹಿಳೆಯರಿಗೆ ತಾಯಿ ಮರಣ ಶಿಶು ಮರಣ ಹಾಗೂ ಪೌಷ್ಟಿಕಾಂಶ ಆಹಾರ ಕುರಿತು ಅರಿವು ಮೂಡಿಸಲಾಯಿತು ಜೊತೆಗೆ ಗರ್ಭಿಣಿ ಸ್ತ್ರೀಯರ ಯೋಗಕ್ಷೇಮ ಆರೋಗ್ಯ ಮಾಹಿತಿ ಸರ್ಕಾರದ ಸೌಲಬ್ಯಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸಿ ಈ ಯೋಜನೆಯನ್ನು ಯಶಸ್ವಿಯಾಗಿ 2 ವರ್ಷ ಪೂರೈಸಿ ನಮ್ಮ ಸಂಸ್ಥೆಯು ಪ್ರಶಂಸೆಗೆ ಪ್ರಾತ್ರವಾಗಿದೆ.
Pre-School Early Intervention:-
ಶಿವಮೊಗ್ಗ ಜಿಲ್ಲೆಯಲ್ಲಿ ಹಾಗೂ ಶ್ರವಣದೋಷ ಮತ್ತು ಮೆದುಳಿನ ಸಮಸ್ಯೆ ಇರುವಂತ ಮಕ್ಕಳ ಬಗ್ಗೆ ಆಂದೋಲನ ಕೈಗೂಂಡು ಸಾರ್ವಜನಿಕರಿಗೆ ತರಬೇತಿ ಜೀವನ ಕೌಶಲ್ಯ ಚಿಕಿತ್ಸೆ ಹಾಗೂ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಈ ಯೋಜನೆಯನ್ನು 2006 ರಲ್ಲಿ ಪ್ರಾರಂಭಿಸಲಾಗಿರುತ್ತದೆ. ಸಾಮಾಜಿಕ ನ್ಯಾಯ ಸಬಲೀಕರಣ ಸಚಿವಾಲಯ ಭಾರತ ಸರ್ಕಾರ ನವ ದೆಹಲಿ ಇವರ ಅನುದಾನದಲ್ಲಿ ಈ ಯೋಜನೆ ಶ್ರವಣದೋóಷ ಮಾನಸಿಕವಾಗಿ ಕುಂಟಿತರಾದವರಿಗೆ ಮತ್ತು ಮೆದುಳಿನ ನ್ಯೋನ್ಯತೆ ಇರುವಂತ ಮಕ್ಕಳಿಗೆ ಸೂಕ್ತ ತರಬೇತಿದಾರರಿಂದ ತರಬೇತಿ ಜೀವನ ಕೌಶಲ್ಯ ಅವಶ್ಯ ವಿರುವ ಮಕ್ಕಳಿಗೆ ಹಗಲು ಸಂರಕ್ಷಣೆ ಹಾಗೂ ಉತ್ತಮವಾದ ವಿಧ್ಯಾಬ್ಯಾಸವನ್ನು ಕೊಡುವಂತ ಕೆಲಸವನ್ನು ನಿರ್ವಹಿಸುತ್ತಿತ್ತು ಈ ಯೋಜನೆಯು ಇಂತಹ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಮುಖ್ಯ ಪಾತ್ರವಯಿಸುತ್ತಿತ್ತು ಈ ಯೋಜನೆ ಅಡಿಯಲ್ಲಿ 0-06 ವರ್ಷದ ಮಕ್ಕಳನ್ನು ಸಹ ಸಮಿಕ್ಷೆ ಮಾಡಲಾಗಿದ್ದು ನಮ್ಮ ಹೆಚ್ ಹೆಚ್ ಮತ್ತು ಎಮ್ ಆರ್ ಹಾಗೂ ಸಿ ಪಿ ಶಾಲೆಗಳು ವಿನೋಬನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಈ ಯೋಜನೆಯಲ್ಲಿ ವರ್ಷಕ್ಕೆ 80ಕ್ಕೋ ಹೆಚ್ಚಿನ ಮಕ್ಕಳು ಇದರ ಪ್ರಯೋಜನವನ್ನು ಪಡೆದಿದ್ದಾರೆ.