ಸಮಗ್ರ ವ್ಯಸನ ಮುಕ್ತಿ ಹಾಗು ಪುನರ್ವಸತಿ ಕೇಂದ್ರ – ಕಾರವಾರ

ಪರಿಕಲ್ಪನೆ :

ನುಡಿದರೆ ಮುತ್ತಿನ ಹಾರದಂತಿರಬೇಕು. ಕುಡಿದರೆ ಮತ್ತೇರುವಂತಿರಬೇಕು ಎಂಬ ನಾಣ್ಣುಡಿಯಂತೆ ಈ ಆಧುನಿಕ ಯುಗದಲ್ಲಿ ಕಾಲದ ಪ್ರಜ್ಞೆ ಇಲ್ಲದವರಿಗೆ ಗಡಿಯಾರ ಬರೀ ಅಲಂಕಾರಕ್ಕಷ್ಟೇ ಎಂಬಂತೆ 84 ಲಕ್ಷ ಜೀವರಾಶಿಗಳಲ್ಲಿ ಸುಜ್ಞಾನ ಮತ್ತು ವಿವೇಕ ಹೊಂದಿರುವ ಮಾನವ ಇಂದು ಮಾದಕ ವಸ್ತುಗಳ ಸೇವನೆ, ಧೂಮಪಾನ ಹಾಗೂ ಮಧ್ಯಪಾನ ಸೇವನೆಯು ಫ್ಯಾಷನ್, ಅಂತಸ್ತು ಹಾಗೂ ಪ್ರತಿಷ್ಠೆಯೆಂದು ಭಾವಿಸಿ ತಮ್ಮ ಜೀವನ ಮತ್ತು ಜೀವವನ್ನು ನಶ್ವರವಾಗಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ನೈತಿಕವಾಗಿ ಅಧಃಪತನದ ಕಡೆಗೆ ಸಾಗುವ ನಾಗರೀಕರಿಗೆ, ವಿಶೇಷವಾಗಿ ಯುವಕರಿಗೆ ಸದರಿ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಆರೋಗ್ಯಕರ ಮಾಹಿತಿ ಮತ್ತು ಮಾರ್ಗದರ್ಶನ ನೀಡಿ, ಆಪ್ತ ಸಮಾಲೋಚನೆ ಮೂಲಕ ಸುಂದರ ಬದುಕನ್ನು ರೂಪಿಸಿಕೊಳ್ಳಲು ಜಾಗೃತಿ ಮೂಡಿಸಿ ಕುಟುಂಬದೊಂದಿಗೆ ವಿಲೀನಗೊಳಿಸುವ ಕಾರ್ಯಕ್ರಮದ ಅಂಗಸಂಸ್ಥೆಯೇ “ಸಮಗ್ರ ವ್ಯಸನಿಗಳ ಪುನರ್ವಸತಿ ಕೇಂದ್ರ.“

ಗುರಿ ಮತ್ತು ಉದ್ದೇಶಗಳು :
  • ಮಾನವ ಜನ್ಮ ದೊಡ್ಡದು, ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂಬ ಪುರಂದರದಾಸರ ವಾಣಿಯಂತೆ ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಆಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು.
  • ಕ್ಷುಲ್ಲಕ, ಕ್ಷಣಿಕ ಸಂತೋಷಕ್ಕಾಗಿ ಚಟಗಳಿಗೆ ದಾಸರಾಗುವುದನ್ನು ನಿಯಂತ್ರಿಸುವುದು..
  • ಮಧ್ಯವರ್ಜನ ಶಿಬಿರಗಳ ಮೂಲಕ ವ್ಯಸನಿಗಳ ಮನಪರಿವರ್ತನೆ ಮಾಡುವುದು..
  • ಮಾದಕ ಹಾಗೂ ಮಧ್ಯಪಾನ ಸೇವನೆಯಿಂದ ಉಂಟಾಗುವ ಹೃದ್ರೋಗ, ನರಗಳ ದೌರ್ಬಲ್ಯ, ಮತಿಭ್ರಮಣೆ, ಕಣ್ಣಿನ ತೊಂದರೆ, ಸ್ಮರಣಶಕ್ತಿ ಕುಂದುವುದು, ದೈಹಿಕ ಸೆಳೆತ(ನಡುಕ) ನಿದ್ರಾಹೀನತೆ ಇತ್ಯಾದಿ ಪರಿಣಾಮಗಳ ಕುರಿತು ತಿಳುವಳಿಕೆ ನೀಡುವುದು..
ಆಯ್ಕೆ ಪ್ರಕ್ರಿಯೆ :

ಕೇಂದ್ರಕ್ಕೆ ಬರುವ ಪ್ರತಿಯೊಬ್ಬ ವ್ಯಸನಿಯನ್ನು ವೈಯಕ್ತಿಕ ಹಾಗೂ ಕೌಟುಂಬಿಕ ಸಮಾಲೋಚನೆ ಮಾಡಿ, ವ್ಯಸನಿಯ ಸ್ವಇಚ್ಛೆಗೆ ಅನುಗುಣವಾಗಿ, ವೈದ್ಯರ ತಪಾಸಣೆಯ ಆಧಾರದಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಒಂದು ವೇಳೆ ವ್ಯಸನಿಯು ಚಿಕಿತ್ಸೆಗೆ ನಿರಾಕರಿಸಿದರೆ ಮನವೊಲಿಸಿ ದಾಖಲಿಸಿಕೊಳ್ಳಲಾಗುವುದು.

ದಾಖಲಾತಿಗಳ ಮೂಲಗಳು :
  • ಕುಟುಂಬ ವರ್ಗದವರಿಂದ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಮಾಜ ಸೇವಕರಿಂದ
  • ಆರಕ್ಷಕ ಠಾಣೆ, ಸಾಂತ್ವನ ಕೇಂದ್ರಗಳು ಹಾಗೂ ವ್ಯಸನಮುಕ್ತಿ ಹೊಂದಿದ ವ್ಯಸನಿಗಳಿಂದ.
ಸೌಲಭ್ಯಗಳು :
  • ಉತ್ತಮ ವಸತಿ ಮತ್ತು ಆಹಾರ, ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ
  • ಆಪ್ತ ಸಮಾಲೋಚನೆ ಹಾಗೂ ಕುಟುಂಬದೊಂದಿಗೆ ಸಂವಾದ ಮತ್ತು ಗುಂಪು ಚರ್ಚೆ.
  • ಮೌಲ್ಯಶಿಕ್ಷಣ, ವ್ಯಕ್ತಿತ್ವ ವಿಕಸನ, ಯೋಗ ಮತ್ತು ಧ್ಯಾನ.
  • ಜೀವನದಲ್ಲಿ ಜಿಗುಪ್ಸೆ, ನಿರಾಸೆ, ಸೋಲು, ಅನಾಸಕ್ತಿ ಹೊಂದಿದ ಸಂದರ್ಭದಲ್ಲಿ ಮನಸ್ಸಿನ ನಿಯಂತ್ರಣದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಮಾಹಿತಿ ಹಾಗೂ ಮಾರ್ಗದರ್ಶನ.
  • ಉಪನ್ಯಾಸ ಕಾರ್ಯಕ್ರಮ-ಕಾರ್ಯಗಾರ-ಮನರಂಜನಾ ಕಾರ್ಯಕ್ರಮಗಳು, ಆಟೋಟಗಳು ಹಾಗೂ ಗ್ರಂಥಾಲಯದ ವ್ಯವಸ್ಥೆ.

ಸಮಗ್ರ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರ, ಕಾರವಾರ

ಕರ್ನಾಟಕದ ಕಾಶ್ಮೀರವೆಂದೇ ಹೆಸರಾಗಿರುವ ಉತ್ತರ ಕನ್ನಡ ಜಿಲ್ಲೆಯು ಹೆಚ್ಚು ಕರಾವಳಿ ಪ್ರದೇಶವನ್ನು ಹೊಂದಿದ್ದು, ಮೀನುಗಾರಿಕೆಯೇ ಪ್ರಮುಖ ಉದ್ಯೋಗವಾಗಿದೆ. ಬಹು ಸಂಖ್ಯೆಯಲ್ಲಿರುವ ಮೀನುಗಾರರು ಮೀನು ಹಿಡಿದು, ಬರುವ ಆದಾಯದಲ್ಲೇ ಜೀವನ ನಿರ್ವಹಣೆ ಮಾಡುವುದನ್ನು ಕಾಣಬಹುದು. ಹಗಲೆಲ್ಲ ಶ್ರಮವಹಿಸಿ, ಮೈಯನ್ನು ದಂಡಿಸಿಕೊಂಡು ಬಂದ ದೇಹಕ್ಕೆ ಅಯಾಸ ನಿವಾರಣೆ ನೆಪದಲ್ಲಿ ಸ್ಥಳೀಯವಾಗಿ ತಯಾರಿಸುವ ಹಾಗೂ ಕಡಿಮೆ ಬೆಲೆಗೆ ದೊರೆಯುವ ಮದ್ಯಸೇವನೆ ಚಟಕ್ಕೆ ಬಲಿಯಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಸುರಭಿ ಸಂಸ್ಥೆಯು 2016 ರಲ್ಲಿ ಸಮಗ್ರ ವ್ಯಸನಿಗಳ ಪುನರ್ವಸತಿ ಕೇಂದ್ರವನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಸುಸಜ್ಜಿತವಾದ ಕಟ್ಟಡದಲ್ಲಿ ಪ್ರಾರಂಭಿಸಿ ಈವರೆಗೂ 392 ಜನ ವ್ಯಸನಿಗಳಿಗೆ ಚಿಕಿತ್ಸೆ ನೀಡಿ ವ್ಯಸನಮುಕ್ತಗೊಳಿಸಿ ಪುನರ್ವಸತಿ ಕಲ್ಪಸಿಕೊಡಲಾಗಿದೆ.

ಕೇಂದ್ರದಲ್ಲಿ ಮಾದಕ ವಸ್ತುಗಳ ಹಾಗೂ ಮದ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ತರಬೇತಿ ಪಡೆದ, ಆಳವಾದ ಜ್ಞಾನವುಳ್ಳ ಸಿಬ್ಬಂದಿಗಳು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಗಳು ವ್ಯಸನಿಗಳ ಬದುಕನ್ನು ಬದಲಾಯಿಸುವ ದಿಕ್ಸೂಚಿಯಂತೆ ಮಾರ್ಗದರ್ಶಕರಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರಕ್ಕೆ ಬಂದ ವ್ಯಸನಿಗಳ ಜೊತೆ ಸೌಹಾರ್ದತೆಯಿಂದ ನಡೆದುಕೊಂಡು ತ್ವರಿತಗತಿಯಲ್ಲಿ ಗುಣಮುಖರಾಗುವಂತೆ ನೊಡಿಕೊಳ್ಳುವ ಸಿಬ್ಬಂದಿಯನ್ನು ಇಲ್ಲಿ ಕಾಣಬಹುದು.

ಕೇಂದ್ರದಲ್ಲಿ ದಾಖಲಾಗಿ ವ್ಯಸನಿಯು ವ್ಯಸನಮುಕ್ತನಾಗಿ ಬಿಡುಗಡೆಯಾದ ನಂತರ ಸಿಬ್ಬಂದಿಯವರು ವ್ಯಸನಮುಕ್ತ ಫಲಾನುಭವಿಯ ಕುಟುಂಬಕ್ಕೆ ಭೇಟಿ ನೀಡಿ ವ್ಯಸನಿಯು ವ್ಯಸನದಿಂದ ಸಂಪೂರ್ಣವಾಗಿ ಮುಕ್ತರಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಒಂದು ವೇಳೆ ಅವರ ಜೀವನದಲ್ಲಿ ಮತ್ತೇನಾದರೂ ಸಮಸ್ಯೆಗಳಿದ್ದರೆ ಪರಿಹಾರ ನೀಡುವುದರ ಜೊತೆಗೆ ನಿರಂತರ ಅನುಪಾಲನಾ ಕಾರ್ಯವನ್ನು ಕೈಗೊಳ್ಳಲಾಗುವುದು.

ಕೇಂದ್ರದ ಸಿಬ್ಬಂದಿಯವರಿಂದ ಮೀನು ಬಲೆ ತಯಾರಿಸುವ ಕಾರ್ಮಿಕರಿಗೆ ಮಾದಕ ವಸ್ತು ಹಾಗೂ ಮದ್ಯಪಾನ ಸೇವನೆಯ ದುಷ್ಪರಿಣಾಮಗಳು ಹಾಗೂ ವೈಯಕ್ತಿಕವಾಗಿ ಮತ್ತು ಕುಟುಂಬಗಳಿಗೆ ಆಗುವ ನಷ್ಟಗಳು ಹಾಗೂ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮದ್ಯಸೇವನೆಯಿಂದಾಗಿ ಕ್ಷಣಿಕ ಮೋಜಿಗಾಗಿ ಬಲಿಯಾಗಬಾರದೆಂಬ ತಿಳುವಳಿಕೆ ನೀಡುತ್ತಿರುವುದನ್ನು ಕಾಣಬಹುದು.

ಯಶೋಗಾಥೆ: ಕೇಂದ್ರದ ಮಾರ್ಗದರ್ಶನ : ಕುಟುಂಬದೊಂದಿಗೆ ಮಿಲನ

ನಾನು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡ ಎಂಬ ಗ್ರಾಮದಲ್ಲಿ ಗಣಪತಿ ಭೋವಿಯವರ ಹಿರಿಯ ಮಗನಾಗಿ ಜನಿಸಿದೆ, ಬಡಗಿ ಕೆಲಸ ನಮ್ಮ ಕುಲ ಕಸುಬು, ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹತ್ತನೇ ತರಗತಿಯವರೆಗೆ ಕಡವಾಡದಲ್ಲಿಯೇ ಮುಗಿಸಿದ್ದೇನೆ. ನಂತರ ಮನೆಯ ಪರಿಸ್ಥಿತಿ ಗಂಭೀರವಾಗಿರುವುದರಿಂದ ಮನೆಯ ಹಿರಿಯ ಮಗನಾಗಿ ಜವಬ್ದರಿಯನ್ನು ತೆಗೆದುಕೊಂಡು ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಅಲ್ಲಿಂದ ವೃತ್ತಿ ಜೀವನ ಆರಂಭಿಸಿದೆನು, ಮನೆಯ ಎಲ್ಲಾ ಜವಬ್ದಾರಿಯನ್ನು ನಿರ್ವಹಿಸುತ್ತಿದ್ದೆನು. ನನಗೆ ಅಕ್ಕ ಮತ್ತು ತಮ್ಮ ಇಬ್ಬರು ಇದ್ದರು ನನಗೆ ಮಾತು ತೊದಲುವುದರಿಂದ ಮದುವೆಯಾಗದ ಸಮಸ್ಯೆಯಿಂದ ನನಗಿಂತ ಮೊದಲು ತಮ್ಮನ ಮದುವೆಯಾಯಿತು, ಇದರಿಂದ ಜನರು ಅಣಕಿಸುತ್ತಿದ್ದರು ಆದರಿಂದಾಗಿ ಕುಡಿಯುವುದಕ್ಕೆ ಆರಂಭಿಸಿದಾಗ ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು. ಇದನ್ನು ಅರಿತ ನನ್ನ ತಮ್ಮ ದಿನಾಂಕ 09-03-2017 ರಲ್ಲಿ ಸುರಭೀ ವ್ಯಸನ ಮುಕ್ತ ಹಾಗೂ ಪುನರ್ವಸತಿ ಕೇಂದ್ರ ಕಾರವಾರದಲ್ಲಿ ಚಿಕಿತ್ಸೆ ಪಡೆಯುವುದಕೋಸ್ಕರ ದಾಖಲುಮಾಡಿದ, ನಾನು ಸುಮಾರು 27ನೇ ವಯಸ್ಸಿನಲ್ಲಿ ಮದ್ಯಪಾನ ಸೇವಿಸಲು ಪ್ರಾರಂಭಿಸಿ 11 ವರ್ಷ ಸತತವಾಗಿ ಮದ್ಯಪಾನ ಸೇವನೆಯಿಂದಾಗಿ ನನ್ನ ಆರೋಗ್ಯ ಪರಿಸ್ಥಿತಿ ತುಂಬಾ ಹದ್ದಗೆಟ್ಟಿತು. ಆದುದರಿಂದ ಈ ಸಂಸ್ಥೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದಕ್ಕೆ ಮುಂದಾದೆನು. ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವಾಗ ಪ್ರತಿ ದಿನ ಬೆಳ್ಳಗೆ ಬೇಗ ಎದ್ದು ಯೋಗ, ದ್ಯಾನ, ಪ್ರಾರ್ಥನೆ ಮಾಡುವುದು, ತರಗತಿಗೆ ಹಾಜರಾಗಿ ಬೋಧನೆ ಮಾಡುತ್ತಿದ್ದ ವಿಷಯವನ್ನು ಆಸಕ್ತಿಯಿಂದ ಕೇಳುವುದು, ಅರ್ಥ ಆಗದ ವಿಷಯವನ್ನು ಕೇಳಿ ತಿಳಿದುಕೊಳ್ಳುವುದು ಮತ್ತು ವೈಯಕ್ತಿಕ ಅಪ್ತಸಮಾಲೋಚನೆಯಲ್ಲಿ ನÀನ್ನ ಸಮಸ್ಯೆಗಳನ್ನು ಹೇಳಿಕೋಳುವುದರ ಮೂಲಕ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಹೇಗೆ ಬಗೆಹರಿಸಬಹುದು ಎಂಬುದನ್ನು ತಿಳಿದುಕೊಂಡೆನು. ಹಾಗೇ ಅಪ್ತಸಮಾಲೋಚಕರು ಪ್ರತಿದಿನ ತರಗತಿಯಲ್ಲಿ ಮಧ್ಯಪಾನ ಸೇವನೆಯಿಂದ ಅಗುವ ದುಷ್ಪರಿಣಾಮಗಳ ಬಗ್ಗೆ ಹೇಳುವುದನ್ನು ಕೇಳಿ ನನ್ನ ಯೋಚನೆ, ನಡವಳಿಕೆ ಮತ್ತು ವರ್ತನೆಯನ್ನು ಸಂಪೂರ್ಣವಾಗಿ ಬದಲಾಯಿಸಿ ಕೊಂಡೆನು. ಪ್ರತಿದಿನ ಎಲ್ಲಾ ಚಟುವಟಿಕೆಗಳಲ್ಲಿ ತುಂಬಾ ಉತ್ಸಹಕತೆಯಿಂದ ಭಾಗವಹಿಸುತ್ತಿದೆನು. ಹೀಗೆ ಒಂದು ತಿಂಗಳು ಚಿಕಿತ್ಸೆ ಪೂರೈಸಿದ ನಾನು ಸಂಪೂರ್ಣವಾಗಿ ಮದ್ಯಪಾನವನ್ನು ಬಿಟ್ಟು ಈಗ ಮೊದಲಿನಂತೆ ಜವಬ್ದರಿಯುತ ವ್ಯಕ್ತಿಯಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದೆನೆÉ. ನನ್ನ ಈ ಬದಲಾವಣೆಗೆ ಸುರಭೀ ವ್ಯಸನಮುಕ್ತಿ ಹಾಗೂ ಪು£ರ್ವಸತಿ ಕೇಂದ್ರದ ಕೂಡುಗೆ ಅಪರವಾಗಿದೆ, ಶ್ರೀ ಸುರಭೀ ಸಂಸ್ಥೆಯ ಸಿಬ್ಬಂದಿಗೆ ಹಾಗೂ ಸ್ಥಾಪಕರಿಗೆ ನನ್ನ ಮತ್ತು ನನ್ನ ಕುಟುಂಬದ ವತಿಯಿಂದ ಹೃದಯ ಪೂರ್ವಕ ಧನ್ಯವಾದಗಳು.

ಸಂತೋಷ್ ಭೋವಿ,





ಅಭಿಪ್ರಾಯ :

ಶ್ರೀ ಸುರಭೀ ವ್ಯಸನ ಮುಕ್ತಿ ಕೇಂದ್ರವು ಒಂದು ಉತ್ತಮವಾದ ಸಂಸ್ಥೆಯಾಗಿದೆ. ಈ ಸಂಸ್ಥೆಯು ಕೈಗೊಂಡ ಕಾರ್ಯವು ಶ್ಲಾಘನೀಯ. ಈ ಸಂಸ್ಥೆಯು ವ್ಯಸನಕ್ಕೆ ಬಲಿಯಾದವರನ್ನು ಪುನರ್ ವಸತಿಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು ಒಂದು ಖುಷಿಯಾದ ವಿಚಾರ. ಇಂದಿನ ಅದೆಷ್ಟೊ ಕುಟುಂಬಗಳು ಬೀದಿಪಾಲಾಗಿವುದನ್ನು ಈ ಸಂಸ್ಥೆಯು ತಡೆಗಟ್ಟುತ್ತಿದೆ. ಹಲವಾರು ವರ್ಷಗಳಿಂದ ಸಮಾಜದಲ್ಲಿನ ವ್ಯಸನಿಗಳನ್ನು ವ್ಯಸನ ಮುಕ್ತರನ್ನಾಗಿ ಪರಿವರ್ತಿಸಿ ಸಮಾಜಕ್ಕೆ ಅವರನ್ನು ಪುನರ್ ವಸತಿಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ. ಕಾರವಾರ ನಗರಸಭೆಯ ಅದ್ಯಕ್ಷನಾದ ನಾನು ಈ ಸಂಸ್ಥೆಗೆ ಭೇಟಿನಿಡಿದಾಗ, ಸಂಸ್ಥೆಯ ಕಾರ್ಯವೈಖರಿ, ಸಂಸ್ಥೆಯಲ್ಲಿನ ಸ್ವಚ್ಛೆತೆ ಹಾಗು ಸಿಬ್ಬಂದಿ ವರ್ಗದ ನಡವಳಿಕೆ, ವಿಶೇಷ ಕೊಠಡಿಗಳು, ಅಮಲು ರೋಗಿಗಳು ಇರುವ ವ್ಯವಸ್ಥೆ ಅವರಿಗೆ ಇಲ್ಲಿ ಸಿಗುವಂತಹ ಸೌಲಭ್ಯಗಳು ಉತ್ತಮವಾಗಿವೆ. ಸಮಾಜವನ್ನು ವ್ಯಸನ ಮುಕ್ತ ಸಮಾಜವನ್ನಾಗಿ ಪರಿವರ್ತಿಸುವ ಇವರ ಕಾರ್ಯಕ್ಕೆ ನಮ್ಮ ಸಹಾಯ ಸಹಕಾರ ಸದಾ ಇರುತ್ತದೆ. ಸಮಾಜದ ಒಳಿತಿಗಾಗಿ ಇಂತಹ ಕೇಲಸ ಕಾರ್ಯಗಳು ಅತ್ಯಗತ್ಯವಾಗಿದೆ ಎಂದು ಹೇಳಬಯಸುತ್ತೆನೆ.

ಗಣಪತಿ ನಾಯಕ್
ನಗರ ಸಭೆ ಅದ್ಯಕ್ಷರು, ಕಾರವರ