ಪರಿಕಲ್ಪನೆ :
ಆಧುನಿಕ ಯುಗದಲ್ಲಿ ಸಾಮಾಜಿಕ ಸಮಸ್ಯೆಗಳು, ಸವಾಲುಗಳು ಹಾಗೂ ಕೌಟುಂಬಿಕ ತಲ್ಲಣಗಳು ದಿನೇ ದಿನೇ ಹೆಚ್ಚುತ್ತಾ ನಗರಗಳಲ್ಲಿನ ಕೊಳಚೆ ಪ್ರದೇಶಗಳಲ್ಲಿ ಜೀವನ ನಡೆಸುವ ಕುಟುಂಬಗಳ ತಾಯಂದಿರು ತಮ್ಮ ಕುಟುಂಬದ ನಿರ್ವಹಣೆಗಾಗಿ ಹೊರಗಿನ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುವವರೆಗೆ 0-3 ವರ್ಷ ವಯಸ್ಸಿನ ಮಕ್ಕಳನ್ನು ಒಂದು ನಿರ್ದಿಷ್ಠ ಕೇಂದ್ರದಲ್ಲಿ ಬಿಟ್ಟು ಹೋದ ಅವಧಿಯಲ್ಲಿ ಮಕ್ಕಳ ಪಾಲನೆ, ಪೋಷಣೆ ಹಾಗೂ ರಕ್ಷಣೆ ಕಾರ್ಯದ ಜವಾಬ್ದಾರಿಯನ್ನು ನಿರ್ವಹಿಸುವ ಸಂಸ್ಥೆಯೇ“”ರಾಜೀವ್ ಗಾಂಧಿ ಶಿಶುಪಾಲನ ಕೇಂದ್ರ”’’.
ಗುರಿ ಮತ್ತು ಉದ್ದೇಶ :
- ಔಪಚಾರಿಕೆ ಶಿಕ್ಷಣ ಮೂಲಕ ಕಲಿಕೆಗೆ ಅವಕಾಶ ಹೆಚ್ಚಿಸುವುದು.
- ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗೆ ಶ್ರಮಿಸುವುದು ಹಾಗೂ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದು.
- ಪೋಷಕರು ನಿರಾಳವಾಗಿ ಮಕ್ಕಳನ್ನು ಕೇಂದ್ರಕ್ಕೆ ಕಳುಹಿಸಿ ಅವರವರ ಕೆಲಸಕ್ಕೆ ತೆರಳುವಂತೆ ಪ್ರೋತ್ಸಾಹಿಸುವುದು.
- ಅನಕ್ಷರತೆ ಹೆಚ್ಚಿರುವಂತಹ ಪ್ರದೇಶಗಳ ಮಕ್ಕಳಿಗೆ ಙËಪಚಾರಿಕ ಶಿಕ್ಷಣ ನೀಡುವುದು
- ಕೌಟುಂಬಿಕ ಸಮಸ್ಸೆಗಳಿಂದ ಕುಗ್ಗಿಹೊದ ಕುಟುಂಬಗಳಿಗೆ ಆಧಾರವಾಗಿ ಹೊರಗಿನ ಕೆಲಸಕ್ಕೆ ಹೋಗುವ ತಾಯಂದಿರಿಗೆ ಅನುಕೂಲವಾಗುವ ಉದ್ದೇಶ.
ಅರ್ಹ ಫಲಾನುಭವಿಗಳು :
- ಕೂಲಿ ಕಾರ್ಮಿಕರ, ಕೊಳಚೆ ನಿವಾಸಿಗಳ ಮತ್ತು ಅಸಂಘಟಿತ ಕಾರ್ಮಿಕ ಉದ್ಯೋಗಸ್ಥ ಮಹಿಳೆಯರ ಮಕ್ಕಳು.
- 03-06 ವರ್ಷದ ಮಕ್ಕಳು.
ಸೌಲಭ್ಯಗಳು :
- ಮಕ್ಕಳ ವಯಸ್ಸಿಗನುಗುಣವಾಗಿ ತೊಟ್ಟಿಲಿನಲ್ಲಿ ತೂಗಿ ಮಲಗಿಸುವ ಕೆಲಸ.
- ಬೆಳಗಿನ ಉಪಹಾರ, ಮಧ್ಯಾಹ್ನದ ಪೌಷ್ಠಿಕ ಆಹಾರ ಹಾಗೂ ಪೌಷ್ಠಿಕಾಂಶಗಳುಳ್ಳ ಮೊಳಕೆಕಾಳು, ಹಣ್ಣು ಇತ್ಯಾದಿ.
- ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಒದಗಿಸುವುದರ ಜೋತೆಗೆ ಕ್ರೀಡೆ ಹಾಗೂ ಮನೋರಂಜನೆ ಒದಗಿಸುವುದು.
- ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ನೀಡುವುದರ ಮೂಲಕ ಮಕ್ಕಳು ಆರೋಗ್ಯದಂದಿರುವಂತೆ ಗಮನ ಹರಿಸುವುದು.
ರಾಜೀವಗಾಂಧಿ ಶಿಶುಪಾಲನಾ ಕೇಂದ್ರ - ಶಿವಮೊಗ್ಗ.
ಆಧುನಿಕ ಯುಗದಲ್ಲಿ ಅವಿಭಕ್ತ ಕುಟುಂಬಗಳ ಸಾಮರಸ್ಯದ ಕೊರತೆ ಹಾಗೂ ಭಿನ್ನಾಭಿಪ್ರಾಯಗಳಿಂದಾಗಿ ಕುಟುಂಬದಿಂದ ಹೊರ ಬಂದು, ತಮ್ಮ ಜೀವನ ನಿರ್ವಹಣೆಗಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗಿ, ಅಲ್ಲಿಯ ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಕುಟುಂಬಗಳ ಮಹಿಳೆಯರು ತಮ್ಮ ಜೀವನ ನಿರ್ವಹಣೆಗಾಗಿ ಹೊರಗಿನ ಕೆಲಸಕ್ಕಾಗಿ ಹೋಗಿ ಬರುವ ಅನಿವಾರ್ಯತೆ ಇರುತ್ತದೆ. ದಿನದ ಹಗಲೆಲ್ಲ ಕೆಲಸ ಮಾಡಿ ಮನೆಗೆ ವಾಪಸ್ ಬರುª ವರೆಗಿನ ಅವಧಿಯಲ್ಲಿ ಮೂಲಭೂತ ಸೌಕರ್ಯ ವಂಚಿತ ಅವರ ಮಕ್ಕಳ ಪಾಲನೆ, ಪೋಷಣೆ ಜೊತೆಗೆ ಪೌಷ್ಠಿಕಾಂಶ ಆಹಾರ, ಔಪಚಾರಿಕ ಶಿಕ್ಷಣ ಹಾಗೂ ಆಟೋಟಗಳನ್ನು ಆಡಿಸುವುದರ ಮೂಲಕ ಮಕ್ಕಳನ್ನು ಮನರಂಜಿಸುವ “ರಾಜೀವ್‍ಗಾಂಧಿ ಶಿಶುಪಾಲನಾ ಕೇಂದ್ರ’’ ವು ಮಲೆನಾಡಿನ ಹೆಬ್ಬಾಗಿಲೆಂದೇ ಹೆಸರು ಪಡೆದಿರುವ ಶಿವಮೊಗ್ಗ ನಗರದಲ್ಲಿ 2006-07ರಲ್ಲಿ ಪ್ರಾರಂಭವಾಗಿ ಈ ವರೆಗೆ 2655 ಮಕ್ಕಳನ್ನು ಪಾಲನೆಮಾಡಿ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿರುತ್ತದೆ.
ಈ ಕೇಂದ್ರದಲ್ಲಿ ನುರಿತ, ಅನುಭವಿ ಹಾಗೂ ನಿಸ್ವಾರ್ಥ ಸೇವಾ ಮನೋಭಾವವುಳ್ಳ ಹಾಗೂ ಈ ಯೋಜನೆಗೆ ಒಳಪಡುವ ಮತ್ತು ಕೇಂದ್ರಕ್ಕೆ ಬರುವ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಳಜಿ ವಹಿಸಿ ಪಾಲನೆ ಮಾಡುವ ಪ್ರಾಮಾಣಿಕ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಅಕ್ಷರಾಭ್ಯಾಸ, ಓದು ಬರಹ ಮಾಡಿಸಿದರೆ ಹಂತ ಹಂತವಾಗಿ ಮಕ್ಕಳು ಬೆಳವಣಿಗೆ ಹೊಂದುತ್ತಾರೆ. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬ ವೇದವಾಕ್ಯ ಇದೆಯಾದರೂ ಆಧುನಿಕ ಯುಗದಲ್ಲಿ ಕೆಲಸದ ಒತ್ತಡದಲ್ಲಿ ಸಿಲುಕಿದ ಮಹಿಳೆಯರು ತಮ್ಮ ಮಕ್ಕಳಿಗೆ ಮನೆಯಲ್ಲಿ ಪಾಠಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಈ ಸಮಸ್ಯೆಯನ್ನು ಸರಿದೂಗಿಸುವ ಕೆಲಸದಲ್ಲಿ ಕಾರ್ಯನಿರತರಾಗಿರುವ ಕೇಂದ್ರದ ಶಿಕ್ಷಕಿಯರು ಅಕ್ಷರಾಭ್ಯಾಸ ಮಾಡಿಸುತ್ತಿರುವುದು.