ಪರಿಕಲ್ಪನೆ :
ಭಾರತ ದೇಶದ ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗ ಮಕ್ಕಳಿದ್ದಾರೆ. ಶೇಕಡ 60 ಭಾಗ ಯುವಕÀರು ಇರುವ ದೇಶದ ದೊಡ್ಡ ಸಂಪತ್ತೇ ಮಕ್ಕಳು. ಇಂದಿನ ಮಕ್ಕಳೇ ಇಂದಿನ ಪ್ರಜೆಗಳು, ಪ್ರಭುಗಳು. 06 ರಿಂದ 18 ವರ್ಷ ವಯೋಮಾನದ ಶಾಲೆ ಬಿಟ್ಟು ಬೀದಿ ಸುತ್ತುವ ಮಕ್ಕಳು, ಭಿಕ್ಷೆ ಬೇಡುವ ಮಕ್ಕಳು, ದುಡಿಯುವ ಮಕ್ಕಳು, ಚಿಂದಿ ಆಯುವ ಮಕ್ಕಳು, ದೊಂಬರಾಟದ ಮಕ್ಕಳು, ಅಲೆಮಾರಿಗಳು, ಅನಾಥಮಕ್ಕಳು, ವಲಸೆ/ಗುಳೆ ಹೋದ ಮಕ್ಕಳು ವ್ಯಸನಕ್ಕೆ ಮತ್ತು ಇತರ ಶೋಷಣೆಗೆ ಒಳಗಾದ ಮಕ್ಕಳ ಪಾಲನೆ, ಪೋಷಣೆ ಮತ್ತು ರಕ್ಷಣೆ ನೀಡಿ ಸಂವಿಧಾನಿಕ ಮೂಲಭೂತ ಹಕ್ಕುಗಳ ಜೋತೆಗೆ ಮಾನವ ಹಕ್ಕುಗಳನ್ನು ಒದಗಿಸಿ, ಕುಟುಂಬದಲ್ಲಿ ವಿಲೀನಗೊಳಿಸಿ, ಸಾಮಾನ್ಯರಂತೆ ಬದುಕು ರೂಪಿಸಿಕೊಡುವ ಯೋಜನೆಯ ಅಂಗ ಸಂಸ್ಥೆಯೇ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ತೆರೆದ ತಂಗುದಾಣ.
ಗುರಿ ಮತ್ತು ಉದ್ದೇಶ :
- ಸಂದಿಗ್ಧ ಪರಿಸ್ಥಿತಿಯ ಮಕ್ಕಳಿಗೆ ಸಾಮಾಜಿಕ ಜೀವನ ಮತ್ತು ವರ್ತನೆಗಳ ಬಗ್ಗೆ ಮಾರ್ಗದರ್ಶನ ನೀಡುವುದು
- ನಿರಾಶ್ರಿತರನ್ನು ಪಾಲನಾ ಪೋಷಣಾ ಕೇಂದ್ರಗಳಿಗೆ ವರ್ಗಾಯಿಸುವುದು.
- ಉತ್ತಮ ಶಿಕ್ಷಣ ಒದಗಿಸಿ ಅವರಲ್ಲಿರುವ ಸೂಕ್ತ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಅವಕಾಶ ನೀಡುವುದು.
- ಮಕ್ಕಳ ಸಮಗ್ರ ಬೆಳವಣಿಗೆಗೆ ವಿವಿಧ ಕೌಶಲ್ಯ ಭರಿತ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವುದು.
- ಮಗುವಿನ ಪೂರ್ವಾಪರ ಜೀವನವನ್ನರಿತು ಮುಕ್ತ ವಾತಾವರಣಕ್ಕೆ ತರುವುದು.
- ಪುನರ್ವಸತಿ ಕಲ್ಪಿಸಿದ ನಂತರ ಪುನಃ ಸಂಕಷ್ಟಕ್ಕೆ ಒಳಗಾಗದಿರುವಂತೆ ಅನುಸರಣಾ ಕ್ರಮ ವಹಿಸುವುದು.
ದಾಖಲಾತಿ ಮೂಲಗಳು :
- ತಂಗುದಾಣದ ಕ್ಷೇತ್ರ ಕಾರ್ಯಕರ್ತರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಕರೆತರುವುದು.
- ಯೋಜನೆಯ ಮಾಹಿತಿ ಇರುವ ಸಾರ್ವಜನಿಕರು. ಮಕ್ಕಳ ಸಹಾಯವಾಣಿ, ಮಕ್ಕಳ ಕಲ್ಯಾಣ ಸಮಿತಿಯ ಆದೇಶ ಹಾಗೂ ಪೋಲಿಸ್ ಇಲಾಖೆ
ಸೌಲಭ್ಯಗಳು :
- ಊಟ-ವಸತಿ ಮತ್ತು ತಾತ್ಕಾಲಿಕ ಆಶ್ರಯ ನೀಡಿ, ಪಾಲನೆ ಮತ್ತು ಪೋಷಣೆಯ ಜವಾಬ್ದಾರಿ.
- ಆಪ್ತ ಸಮಾಲೋಚನೆ ಮೂಲಕ ಮಕ್ಕಳಲ್ಲಿ ಶಿಕ್ಷಣದ ಆಸಕ್ತಿ ಮೂಡಿಸಿ ಶಾಲೆಗೆ ದಾಖಲಿಸುವುದು.
- ಔಪಚಾರಿಕ ಶಿಕ್ಷಣ, ಮನೋರಂಜನೆ, ಒಳಾಂಗಣ ಮತ್ತು ಹೊರಾಂಗಣ ಆಟಗಳನ್ನು ಆಡಿಸುವುದು.
- ಮಕ್ಕಳಲ್ಲಿ ಆಸಕ್ತಿ ಉಳಿಸಲು ಮಕ್ಕಳ ಸ್ನೇಹಿ ವಾತಾವರಣ, ಸಂಗೀತ ನಾಟಕ, ನಾಟ್ಯ ಹಾಗೂ ಮತ್ತಿತರ ಸಾಂಸ್ಕøತಿಕ ಚಟುವಟಿಕೆಗಳನ್ನು ಏರ್ಪಡಿಸುವುದು.
- ಮಕ್ಕಳ ವಯಸ್ಸಿಗೆ ಅನುಗುಣವಾಗಿ, ವೃತ್ತಿ ತರಬೇತಿ, ಮನರಂಜನೆ, ಸೇತುಬಂಧ ಶಿಕ್ಷಣ ಒದಗಿಸುವುದು.
ಸಮಗ್ರ ಮಕ್ಕಳ ರಕ್ಷಣಾ ಯೋಜನೆ : ತೆರೆದ ತಂಗುದಾಣ, ಶಿವಮೊಗ್ಗ.
ಭಾರತದ ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳಿದ್ದಾರೆ. ಮಕ್ಕಳು ದೇಶದ ಅತಿ ದೊಡ್ಡ ರಾಷ್ಟ್ರೀಯ ಸಂಪತ್ತು. ಇಂದಿನ ಮಕ್ಕಳೇ ಇಂದಿನ ಪ್ರಜೆಗಳೆಂದು ಹೇಳುತ್ತಿರುವ ಇಪ್ಪತ್ತೊಂದನೇ ಶತಮಾನದಲ್ಲಿಯೂ ಭಿಕ್ಷೆಬೇಡುವ, ಚಿಂದಿಆಯುವ, ಕೂಲಿಕೆಲಸ ಮಾಡುವ, ವ್ಯಸನಕ್ಕೆ ಮತ್ತು ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಸಮಸ್ಸೆಗೆ ಆಸರೆಯಾಗಿ “ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ತೆರೆದ ತಂಗುದಾಣವು”, ಶಿವಮೊಗ್ಗ ನಗರದ ಕಾಶೀಪುರ ಗಣಪತಿ ದೇವಸ್ಥಾನ ಹತ್ತಿರ, 2011-12 ರಿಂದ ಸುಸಜ್ಜಿತವಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಾ ಬಂದು 427 ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮುಖ್ಯವಾಹಿನಿಗೆ ತರುವ ಕೆಲಸವಾಗಿದೆ.
ಈ ಕೇಂದ್ರದಲ್ಲಿ ನುರಿತ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ದಾಖಲಾಗುವ ಪ್ರತಿಯೊಂದು ಮಗುವಿಗೂ ಉಚಿತ ಊಟ, ವಸತಿ ಬಟ್ಟೆಯ ಜೊತೆಗೆ ಪ್ರತ್ಯೇಕ ಹಾಸಿಗೆ, ಹೊದಿಕೆ ಹಾಗೂ ವೈದ್ಯಕೀಯ ತಪಾಸಣೆ, ಆಪ್ತ ಸಮಾಲೋಚನೆ, ಕುಟುಂಬ ಸಮಾಲೋಚನೆ, ಔಪಚಾರಿಕೆ ಶಿಕ್ಷಣ, ಮನರಂಜನಾ ಕಾರ್ಯಕ್ರಮ ಏರ್ಪಡಿಸುವುದರ ಮೂಲಕ ಮಕ್ಕಳ ಸರ್ವೋತ್ತಮ ಬೆಳವಣಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ಕೇಂದ್ರದಲ್ಲಿ ಕಾಣಬಹುದು.
ಈ ಯೋಜನೆಯ ವ್ಯಾಪ್ತಿಗೆ ಬರುವ ಫಲಾನುಭವಿಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಶಾಲೆ, ಕಾಲೇಜು, ಸಂಘ ಸಂಸ್ಥೆಗಳಲ್ಲಿ, ಅಂಗನವಾಡಿ ಕೇಂದ್ರಗಳು ಹಾಗೂ ಇತರೆ ಕಡೆಗಳಲ್ಲಿ ಜನಜಾಗೃತಿ ಹಾಗೂ ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನರಿಗೆ ಕಾರ್ಯಕ್ರಮದ ಮಾಹಿತಿ ತಿಳಿಸುವುದು.
ಅಮೇರಿಕಾದ ಮಾಜಿ ಅಧ್ಯಕ್ಷರಾಗಿದ್ದ ಅಬ್ರಾಹಂ ಲಿಂಕನ್‍ರವರು ಹೇಳಿರುವಂತೆ, ‘ನೀವು ಏನು ಕಾರ್ಯಕ್ರಮ ಆರಂಭಿಸಿದ್ದೀರೋ ಅದನ್ನು ಮುಂದುವರೆಸಿಕೊಂಡು ಹೋಗುವ ವ್ಯಕ್ತಿಯೇ ಮಗು. ನೀವು ಎಲ್ಲಿ ಕುಳಿತಿದ್ದೀರೋ, ಅಲ್ಲಿ ಆತ ಕುಳಿತುಕೊಳ್ಳಲಿದ್ದಾನೆ, ನಿಮ್ಮ ನಂತರ ಯಾವ ಯಾವ ವಿಷಯಗಳಿಗೆ ಮಹತ್ವ ನೀಡಿದ್ದೀರೋ ಅವುಗಳ ಬಗ್ಗೆ ಗಮನ ಹರಿಸುವ ವ್ಯಕ್ತಿಯೂ ಆತನೇ. ಮಾನವತೆಯ ಭವಿಷ್ಯವೇ ಆತನ ಕೈಯಲ್ಲಿದೆ’. ಆದ್ದರಿಂದ ನಾವೆಲ್ಲರೂ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಗಾದೆಯಂತೆ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಸರಿಯಾದ ನೈತಿಕ ಮೌಲ್ಯಗಳು ಹಾಗೂ ಆದರ್ಶ ಗುಣಗಳನ್ನು ಬೆಳೆಸುವುದರ ಮೂಲಕ ಮಕ್ಕಳನ್ನು ದೇಶದ ಸಂಪತ್ತನ್ನಾಗಿ ಮಾಡಬಹುದಾಗಿದೆ.