ದಾಖಲಾತಿ ಪ್ರಕ್ರಿಯೆ :
- ವಯೋಮಿತಿ 60 ವರ್ಷ ಮೇಲ್ಪಟ್ಟಿರಬೇಕು.
- ಆಧಾರಕಾರ್ಡ/ ಮತದಾರರಗುರುತಿನಚೀಟಿ/ ರೇಶನ್‍ಕಾರ್ಡ,
- ಫಲಾನುಭವಿಯ ಸಂಬಂದಿಕರ ಸಹಿ.
- ಫಲಾನುಭವಿಯ ಸಂಬಂದಿಕರುಇರದೇಇದ್ದ ಪಕ್ಷದಲ್ಲಿಗ್ರಾಮ ಪಂಚಾಯತಿ/ ಅಧವಾ ನಗರಸಭೆ ಸದಸ್ಯರು ಸಹಿ ಮಾಡಿದ ಪತ್ರ.
- ಸಂಘ ಸಂಸ್ಥೆಗಳಿಂದ ಬಂದರೆ ಆ ಸಂಘ ಸಂಸ್ಥೆಯ ಪತ್ರ.
- ಪೋಲಿಸ ಠಾಣೆಯಿಂದ ಬಂದಲ್ಲಿ ಪೋಲಿಸ ಠಾಣೆಯ ಪತ್ರ.
- ಫಲಾನುಭವಿಯುದಾಖಲಾಗಲು ಬಯಸುವ ಸ್ವಇಚ್ಚೆಯ ಪತ್ರ.
- ಯಾವುದೇಗುರುತಿನಚೀಟಿಇಲ್ಲದಿದ್ದಲ್ಲಿ ರಹವಾಸಿ ಪತ್ರವನ್ನುಕಡ್ಡಾಯವಾಗಿತರಬೇಕು.
- ವಯೋಮಿತಿಯದಾಖಲಾತಿ.
ಸೌಲಭ್ಯಗಳು:-
- ವಸತಿ ಸೌಲಭ್ಯ
- ಊಟೋಪಚಾರ ಸೌಲಭ್ಯ
- ವೈದ್ಯಕಿಯ ಸೌಲಭ್ಯ
- ಮನೊರಂಜನಾ ಸೌಲಭ್ಯ
- ಯೋಗ ಮತ್ತುಧ್ಯಾನ
- ಆಪ್ತಸಮಾಲೋಚನೆ
- ಅಂತ್ಯಕ್ರಿಯ
1) ವಸತಿ ಸೌಲಭ್ಯ :-
ನಮ್ಮ ವೃದ್ದಾಶ್ರಮದಲ್ಲಿದಾಖಲಾದಪ್ರತಿಯೋಬ್ಬ ಫಲಾನುಭವಿಗಳಿಗೂ ಮಂಚ ಮತ್ತು ಹಾಸಿಗೆ ವ್ಯವಸ್ಥೆಯನ್ನುಮಾಡಲಾಗೋತ್ತಿದೆ.ಅವರಿಗೆ ದಿನಾಲೂ ಸ್ನಾನ ಮಾಡಲುಬಿಸಿನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.ಅವರಿಗೆ ದಿನಾಲೂ ದರಿಸಲು ಬಟ್ಟೆಗಳನ್ನು ಕೋಡಲಾಗುತ್ತದೆ.ಪತ್ರಿ 6 ತಿಂಗಳಿಗೋಮ್ಮೇ ಹೊಸ ಬಟ್ಟೆಯನ್ನು ವಿತರಿಸಲಾಗುತ್ತದೆ.ಅವರಿಗೆಕೂಡಿಯಲು ಶುದ್ಧ ನೀರಿನ ವೈವಸ್ಥೆಯನ್ನು ಮಾಡಲಾಗಿದೆ.
2) ಊಟೋಪಚಾರ ಸೌಲಭ್ಯ:-
ಸುರಭೀ ವೃದ್ಧಾಶ್ರಮದಲ್ಲಿ ಬೆಳಗೆ 6-00 ಘಂಟೆಗೆ ಚಹಾ, 9-00 ಘಂಟೆಗೆಉಪಹಾರ(ಚಿತ್ರಣ್ಣ, ಉಪ್ಪಿಟ್ಟ, ಅವಲಕ್ಕಿ, ಪಲ್ಲಾವ, ಇಡ್ಡಲಿ ಮುಂತಾದವು) ಮಧ್ಯಾಹ್ನ 1-30 ಕ್ಕೇ ಊಟ ( ರೋಟ್ಟಿ, ತರಕಾರಿ ಪಲ್ಲೆ, ಮುಸರು, ಅನ್ನಾ, ಸಾಂಬರ) ಸಾಯಂಕಾಲ 5-00 ಘಂಟೆಗೆ ಚಹಾ, ಬಿಸ್ಕೇಟ, ರಾತ್ರಿ 8-30 ಕ್ಕೆ ಊಟ (ಚಪಾತಿ, ಕಾಳ ಪಲ್ಲೆ, ಮೋಸರು, ಅನ್ನಾ, ಸಾಂಬರ)ನೀಡಲಾಗುತ್ತದೆ. ಪ್ರತಿ ಭಾನುವಾರ ಸಿಹಿ ಊಟವನ್ನು ನೀಡಲಾಗುತ್ತದೆ ಪ್ರತಿ ಹಬ್ಬದ ದಿನಗಳಲ್ಲಿ ಸ್ಥಳಿಯವಾಗಿ ಮಾಡತಕ್ಕಂತತಿಂಡಿ ತಿನಿಸುಗಳನ್ನ ನೀಡಲಾಗುತ್ತದೆ.
3) ವೈದ್ಯಕಿಯ ಸೌಲಭ್ಯ:-
ನಮ್ಮಆಶ್ರಮದಲ್ಲಿ ಫಲಾನುಭವಿಗಳ ಆರೋಗ್ಯದದೃಷ್ಠಿಯಿಂದಒಬ್ಬ ವ್ಯದ್ಯರು ಮತ್ತುಒಬ್ಬ ಶುಶ್ರೂಕರನ್ನು ನೇಮಕ ಮಾಡಲಾಗಿದೆ. ಪ್ರತಿ ಫಲಾನುಭವಿಗಳ ಆರೋಗ್ಯವನ್ನು ವಾರಕ್ಕೆಒಂದು ಸಲ ತಪ್ಪಾಸನೆ ಮಾಡಲಾಗುತ್ತದೆ.ಯಾವುದೇ ಫಲಾನುಭವಿಗೆಆರೋಗ್ಯದಲ್ಲಿಏರುಪೇರಾದರೆತಕ್ಷಣ ವೈದ್ಯರನ್ನುಕರೆಯಿಸಲಾಗುವುದು ಮತ್ತುಅವರ ಸಲಹೆ ಮೇರೆಗೆ ಶುಶ್ರೂಕರ ಔಷದಿಗಳನ್ನು ನೀಡುವರು.ಏನಾದರೂತೀವ್ರತರ ಕಾಯಿಲೆಗಳು ಇದ್ದಲಿ ಅಂಥವರನ್ನು 108 ಕೆ ಆಂಬುಲೆನ್ಸ್‍ಗೆಕರೆಮಾಡಿಅವರನ್ನುಜಿಲ್ಲಾಆಸ್ಪತ್ರೆಗೆಕರೆದೊಯೆದುಚಿಕಿತ್ಸೆಕೋಡಿಸಲಾಗುವುದು.
4) ಮನೊರಂಜನಾ ಸೌಲಭ್ಯ:-
ನಮ್ಮಆಶ್ರಮದಲ್ಲಿ ಫಲಾನುಭವಿಗಳಿಗೆ ಮನೊರಂಜನೆಗಾಗಿದೂರದರ್ಶನ ವ್ಯವಸ್ಥೆ, ದಿನ ಪತ್ರಿಕೆಗಳು, ಒಳಾಂಗನ ಆಟಗಳು, (ಕೇರಂ, ಚೇಸ್ಸ, ಹಾವು ಏಣಿ ಆಟ, ಮುಂತಾದವು) ವ್ಯವಸ್ಥೆಯನ್ನು ಮಾಡಲಾಗಿದೆ, ಪ್ರತಿ ತಿಂಗಳಿಗೊಮ್ಮೆ ಸಂಗೀತಅಥವಾ ಭಜನಾಕಾರ್ಯಕ್ರಮವನ್ನು ಹಮ್ಮಿಕೋಳ್ಳಲಾಗುವುದು. ಪ್ರತಿರಾಷ್ಟ್ರೀಯ ಮತ್ತುಧಾರ್ಮಿಕ ಹಬ್ಬಗಳನ್ನು ಆಚರಿಸಲಾಗುವುದು.
5) ಯೋಗ ಮತ್ತುದ್ಯಾನ:-
ಸುರಭೀ ವೃದ್ದಾಶ್ರಮದಲ್ಲಿ ಫಲಾನುಭವಿಗಳ ಆರೋಗ್ಯದೃಷ್ಠಿಯಿಂದಒಬ್ಬಯೋಗಾ ಶಿಕ್ಷಕರನ್ನು ನೇಮಕಾತಿ ಮಾಡಲಾಗಿದೆ.ದಿನಾಲೂ ಬೆಳಗೆ 7-00 ಘಂಟೆಗೆಯೋಸನಾ ಮತ್ತುಸಂಜೆ 6-00 ಘಂಟೆಗೆದ್ಯಾನ ಮಾಡಿಸಲಾಗುವುದು.
6) ಆಪ್ತಸಮಾಲೋಚನೆ:-
ನಮ್ದ ಆಶ್ರಮದಲ್ಲಿ ಫಲಾನುಭವಿಗಳಿಗೆ ಆಪ್ತಸಮಾಲೋಚನೆಯನ್ನು ಮಾಡಲಾಗುತ್ತದೆ.ಫಲಾನುಭವಿಗಳಿಗೆ ಆಪ್ತಸಮಾಲೋಚನೆ ಮಾಡುವದರ ಮೂಲಕ ಮನೋಸ್ತೈರೆವನ್ನುತುಂಬಲಾಗುತ್ತದೆ.ಆಪ್ತಸಮಾಲೋಚನೆಯ ಮೂಲಕ ಅವರ ಮನಸಿನ ಇಚ್ಚೆಯನ್ನು ತಿಳಿದಿಕೊಳ್ಳಲಾಗುವುದು.ಮರಳಿ ಅವರುತಮ್ಮ ಮನೆಗೆ ಹೋಗಲು ಯೋಚಿಸಿದ್ದರೆ ಅವರ ಮಕ್ಕಳಿಗೆ ಅಥವಾ ಸಂಬಂದಿಕರಿಗೆ ಕರೆಯಿಸಿ ಅವರಿಗೂಆಪ್ತಸಮಾಲೋಚನೆ ಮಾಡಿತಮ್ಮತಂದೆ, ತಾಯಿಯನ್ನುಮರಳಿ ಕರೆದುಕೊಂಡು ಹೋಗುವಂತೆ ಮನವೊಲಿಸಲಾಗುವುದು.
7) ಅಂತಕ್ರಿಯೆ:-
ನಮ್ಮಆಶ್ರಮದಲ್ಲಿದಾಖಲಾದ ಫಲಾನುಭವಿಯೂ ಮೃತಪಟ್ಟರೆ, ಮೊದಲಿಗೆಅವರ ಸಂಭಂದಿಕರಿಗೆ ತಿಳಿಸಲಾಗುವುದು.ಅವರ ಸಂಭಂದಿಕರು ಮೃತ ಶರೀರವನ್ನುತೆಗೆದುಕೊಂಡ ಹೋಗಲು ನಿರಾಕರಿಸಿದರೆ ನಮ್ಮಆಶ್ರಮದವತಿಯಿಂದಲೇಅಂತ್ಯಸಂಸ್ಕಾರವನ್ನು ಆ ವೈಕ್ತಿಯಧರ್ಮದವಿಧಿ ವಿಧಾನ ಪ್ರಕಾರ ಮಾಡಲಾಗುವುದು.
ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ
ಈ ವೃದ್ಧಾಶ್ರಮವನ್ನುಜಿಲ್ಲಾ ಮಟ್ಟದಲ್ಲಿಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರಕಲ್ಯಾಣ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಇಲಾಖೆಯಉಪನಿರ್ದೇಶಕರು ಮೇಲ್ವಿಚಾರಣೆ ಮಾಡುತ್ತಾರೆ.ರಾಜ್ಯ ಮಟ್ಟದಲ್ಲಿವಿಕಲಚೇತನರ ಹಾಗೂ ಹಿರಿಯ ನಾಗರಿಕರಕಲ್ಯಾಣಇಲಾಖೆಯ ನಿರ್ದೇಶಕರುಮೇಲ್ವಿಚಾರಣೆ ಮಾಡುತ್ತಾರೆ ಹಾಗೂ ರಾಷ್ಟ್ರ ಮಟ್ಟದಲ್ಲಿಸಾಮಾಜಿಕ ನ್ಯಾಯ ಮತ್ತು ಸಭಲೀಕರಣ ಸಚಿವಾಲಯದಅಧಿನ ಕಾರ್ಯದರ್ಶಿಗಳು ಮೇಲ್ವಿಚಾರಣೆ ಮಾಡುತ್ತಾರೆ.ಪ್ರಾಂತಿಯ ಸಂಪನ್ಮೂಲ ತರಬೇತಿಕೇಂದ್ರದವರು (ನೈಂಟಿಗೆಲ್ ಸಂಸ್ಥೆ ಬೆಂಗಳೂರು) ಮೌಲ್ಯಮಾಪನ ಮಾಡುತ್ತಾರೆ.