ಸುರಭಿ ಮಹಿಳಾ ಮಂಡಳಿ (ರಿ) ಈ ಸಂಸ್ಥೆಯ ಸಹಯೋಗದೊಂದಿಗೆಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಅದರಲ್ಲಿ ಶಿವಮೊಗ್ಗದಲ್ಲಿ ಸಮಗ್ರ ಮಕ್ಕಳ ರಕ್ಷಣಾಯೋಜನೆಯ ಅಡಿಯಲ್ಲಿ“ಸುರಭಿ ತೆರೆದ ತಂಗುದಾಣ”ಎಂದು ಸ್ಥಾಪಿಸಲಾಗಿದೆ. ಇದರಉದ್ದೇಶ ನಗರ ಮತ್ತುಅರೆ ನಗರ ಪ್ರದೇಶಗಳಲ್ಲಿ ಬೀದಿ ಮಕ್ಕಳು,ಭಿಕ್ಷುಕರು, ದುಡಿಯುವ ಮಕ್ಕಳು, ಚಿಂದಿ ಆಯುವವರು, ಸಣ್ಣ ವ್ಯಾಪರಿಗಳು,ದೊಂಬರಾಟದ ಮಕ್ಕಳು,ಅಲೆಮಾರಿಗಳು,ಅನಾಥ ಮಕ್ಕಳು,ಒಡಿ ಹೋದ ಮಕ್ಕಳು,ವಲಸೆ/ಗೂಳೆ ಹೋದ ಮಕ್ಕಳು,ಮತ್ತುಇತರೆ ಶೋಷಣೆಗೆ ಒಳಗಾದ 6 ರಿಂದ 18 ವರ್ಷದ ಒಳಗಿನ ಮಕ್ಕಳ ರಕ್ಷಣೆ ಮತ್ತು ಸರ್ವತೋಮುಖ ಬೆಳವಣಿಗೆಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಸಮಗ್ರ ಮಕ್ಕಳ ರಕ್ಷಣಾಯೋಜನೆಯತೆರೆದತಂಗುದಾಣಕಾರ್ಯನಿರ್ವಹಿಸುತಿದ್ದು. 495 ಇವರೆಗೆ ಮಕ್ಕಳು ದಾಖಲಾಗಿದ್ದು 469 ಮಕ್ಕಳಿಗೆ ಬಿಡುಗಡೆ ಮಾಡಿ ಪುರ್ನವಸತಿಯನ್ನು ಮಾಡಲಾಗಿದೆ.
ಸಮಗ್ರ ಮಕ್ಕಳ ರಕ್ಷಣಾಯೋಜನೆಯ ಅಡಿಯಲ್ಲಿ“ಸುರಭಿ ತೆರೆದ ತಂಗುದಾಣ” ದಲ್ಲಿ ನೀಡುತ್ತಿರುವ ಸೌಲಭ್ಯಗಳು
- ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪಾಲನೆ ಮತ್ತು ಪೋಷಣೆಯನ್ನು ಮಾಡುವುದು .
- ಪೌಷ್ಠಿಕ ಆಹಾರ ಮತ್ತು ಉತ್ತಮ ವಸತಿಯನ್ನು ಕಲ್ಪಿಸುವುದು.
- ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸುವುದು
- ಸಂಸ್ಥೆಗೆ ದಾಖಲಾದ ಮಗುವಿನ ಗೃಹ ಭೇಟಿಯನ್ನು ಮಾಡಿ ಮಗುವಿನ ಪ್ರಕರಣದ ಹಿನ್ನಲೆಯ ಆಧಾರದ ಮೇಲೆ ಸೌಲಭ್ಯ ಒದಗಿಸುವುದು .
- ಮಗುವಿಗೆ ಪ್ರತಿ 15 ದಿನಗಳಿಗೊಮ್ಮೆ ಆಪ್ತಸಮಾಲೊಚನೆಯ ಮೂಲಕ ಮಗುವಿನಲ್ಲಿ ಆದ ಬದಲಾವಣೆಯನ್ನು ಗುರುತಿಸಿ ಆತ್ಮಸ್ಥೈರ್ಯ ತುಂಬುವುದು.
- ಮಗುವಿನ ವೈಯಕ್ತಿಕ ಪೋಷಣ ವರದಿಯನ್ನು ತಯಾರಿಸುವುದು
- ಮಗುವಿನ ಕಲಿಕೆಗೆ ಅನುಗುಣವಾಗಿ ಸೇತುಬಂಧ ಶಿಕ್ಷಣ ನೀಡುವುದು.
- ಬೇದ್ಯ ವಾತಾವರ್ಣದಿಂದ ಮುಕ್ತ ಗೊಳಿಸಿ ಸಮಾಜದ ಮುಖ್ಯ ವಾಹಿನಿಗೆ ತರುವುದು.
- ಮಕ್ಕಳಿಗೆ ಒಳಾಂಗಣ ಮತ್ತು ಹೊರಾಂಗಣ ಆಟಗಳ ಮೂಲಕ ಮಕ್ಕಳಿಗೆ ಪ್ರೋತ್ಸಹಿಸುವುದು.
- ಜಾಗೃತಿ ಕಾರ್ಯಕ್ರಮದ ಮೂಲಕ ಸಂಸ್ಥೆಯ ಮೂಲಭೂತ ಉದ್ದೆಶಗಳನ್ನು ಜನರಲ್ಲಿ ಅರಿವು ಮೂಡಿಸುವುದು.
- ಮಕ್ಕಳಿಗೆ ಪ್ರತಿದಿನ ಪ್ರಾರ್ಥನೆಯನ್ನು ಮಾಡಿಸುವುದು
- ನೃತ್ಯ ಮತ್ತು ಹಾಡು ಹಾಗೂ ಟಿ ವಿ ವೀಕ್ಷಣೆಯ ಮೂಲಕ ಮನರಂಜನೆ ಕಲ್ಪಿಸುವುದು
- ಮಗುವಿಗೆ ಮಾನಸಿಕ ಮತ್ತು ಭಾವನಾತ್ಮಕವಾಗಿ ಆತ್ಮ ಸ್ಥೈರ್ಯ ತುಂಬುವುದು
- ಮಗುವಿಗೆ ಸಂಸ್ಥೆಯಲ್ಲಿ ಮನೆಯ ವಾತವರಣವನ್ನು ಕಲ್ಪಿಸುವುದು
- ಮಕ್ಕಳ ಸಮಿತಿ ರಚಿಸಿ ತಿಂಗಳಿಗೊಮ್ಮೆ ಸಭೆ ನಡೆಸಿ ಮಕ್ಕಳ ಕುಂದುಕೊರತೆ ಚರ್ಚಿಸುವುದು.
- ಮಕ್ಕಳಿಗೆ ಪುನರ್ವಸತಿ ಕಲ್ಪಿಸುವುದು
- ಪನರ್ವಸತಿ ಕಲ್ಪಿಸಿದ ಮಕ್ಕಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುವುದು.