ಸುರಬೀ ವ್ಯಸನಮುಕ್ತಿ ಹಾಗೂ ಪುನರ್ವಸತಿ ಕೇಂದ್ರ , ಶಿವಮೊಗ್ಗ

ದಾಖಾಲಾತಿ ಪ್ರಕ್ರಿಯೆ:-
  • ಎಲ್ಲಾ ರೀತಿಯ ಮಾಧಕ ವಸ್ತು ಗಳ ವ್ಯಸನಿಗಳನ್ನು ( ಆಲ್ಕೋಹಾಲ್, ಗುಟುP,À ತಂಬಾಕು, ಡ್ರಗ್, ಗಾಂಜ ಇತ್ಯಾದಿ)ದಾಖಲು ಮಾಡಿಕೊಳ್ಳಲಾಗುತ್ತದೆ.
  • ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ/ರೇಶನ್ ಕಾರ್ಡ್ ಕಡ್ಡಾಯ
  • ಪಲಾನುಭವಿಗಳ ಸಹಿ ಮತ್ತು ಕುಟುಂಬದವರ ಸಹಿ
ಸೌಲಭ್ಯಗಳು:-
  1. ಊಟ, ವಸತಿ
  2. ವೈದಕೀಯ ಚಿಕಿತ್ಸೆ
  3. ಮನೋವೈದ್ಯಕೀಯ ಚಿಕಿತ್ಸೆ
  4. ಆಪ್ತ ಸಮಾಲೋಚನೆ
  5. ಕೌಟುಂಬಿಕ ಸಮಾಲೋಚನೆ
  6. ತರಗತಿಗಳು
  7. ಗುಂಪು ಚರ್ಚೆ,
  8. ಅನಾಮಿಕ ಅಮಲು ರೋಗಿಗಳ ಸಭೆ
  9. ಹೊರಾಂಗಣ & ಒಳಾಂಗಣ ಕ್ರೀಡೆ
  10. ಯೋಗ,ಪ್ರಾಣಾಯಾಮ,ಧ್ಯಾನ ಮತ್ತು ವಿಪಸನ
  11. ವೃತ್ತಿಪರ ತರಭೇತಿ
  12. ಮನೊರಂಜನೆ
  13. ಜಾಗೃತಿ ಕಾರ್ಯಕ್ರಮಗಳು
  14. ಅನುಸರಣಾ ಕ್ರಮ
ಊಟ, ವಸತಿ:-

ನಮ್ಮ ಕೇಂದ್ರದಲಿ ್ಲ ದಾಖಲಾದ ಪಲಾನುಭವಿಗಳಿಗೆ ಚಿಕಿತ್ಸೆ ಅವಧಿ ಮುಗಿಯುವವರೆಗೆ ಊಟ ,ವಸತಿ ಸೌಲಭ್ಯ ಒದಗಿಸಲಾಗುತ್ತದೆ.

ವೈದ್ಯಕೀಯ ಚಿಕಿತ್ಸೆ

ನಮ್ಮ ಕೇಂದ್ರವು ನುರಿತ ವೈಧ್ಯರು ಮತ್ತು ಸ್ಟಾಫ್ ನರ್ಸ್ ಸಿಬ್ಬಂದಿ ಹೊಂದಿದ್ದು ಪಲಾನುಭವಿಗಳಿಗೆ ನಿರ್ವಿಶಿಕರಣ ಚಿಕಿತ್ಸೆ ಹಾಗೂ ಇನ್ನಿತರೆ ಸಾಮಾನ್ಯ ಚಿಕಿತ್ಸೆಗಳನ್ನು ನೀಡಲಾಗುತ್ತದೆ.

ಮನೋವೈದ್ಯಕೀಯ ಚಿಕಿತ್ಸೆ:-

ನಮ್ಮ ಕೇಂದ್ರವು ನುರಿತ ಮನೋವೈದ್ಯರನ್ನು ಹೊದಿದ್ದು ಪಲಾನುಭವಿಗಳಿಗೆ ಮಾನಸಿಕ ಚಿಕಿತ್ಸೆ, ಆಪ್ತಸಮಾಲೋಚನೆ ನೀಡುವ ಮೂಲಕ ಪಲಾನುಭವಿಗಳ ಮಾನಸಿಕ ಸ್ಥಿತಿಯನ್ನು ಉತ್ತಮಗೊಳಿಸಲಾಗುತ್ತದೆ.

ಆಪ್ತ ಸಮಾಲೋಚನೆ:-

ನಮ್ಮ ಕೇಂದ್ರವು ನುರಿತ ಆಪ್ತ ಸಮಾಲೋಚಕರನ್ನು ಹೊಂದಿದ್ದು ಫಲಾನುಭವಿಗಳಿಗೆ ಆಪ್ತಸಮಾಲೋಚನೆ ಮಾಡಲಾಗುತ್ತದೆ, ಪಲಾನುಭವಿಗಳಿಗೆ ಆಪ್ತಸಮಾಲೋಚನೆಯ ಮುಖಾಂತರ ತಮ್ಮ ಜೀವನದ ಬಗ್ಗೆ ಜಾಗೃತಿ ಮೂಡಿಸುವುದು. ಕೌಟುಂಬಿಕವಾಗಿ, ಆರ್ಥಿಕವಾಗಿ ,ಮಾನಸೀಕವಾಗಿ, ಸಾಮಾಜಿಕವಾಗಿ ಆತ್ಮ ಸ್ಥೈರ್ಯ ತುಂಬಿ ಅವರಲ್ಲಿ ಮನಃಪರಿವರ್ತನೆ ಆಗುವಂತೆ ಮಾಡುವುದು.

ಕೌಟುಂಬಿಕ ಸಮಾಲೋಚನೆ:-

ಕೇಂದ್ರದಲ್ಲಿ ಫಲಾನುಭವಿಗಳ ಸಂಬಂಧಿಕರೋಂದಿಗೆ, ಸ್ನೇಹಿತರೊಂದಿಗೆ ಆಪ್ತಸಮಾಲೋಚನೆ ಮಾಡಲಾಗುತ್ತದೆ.

ತರಗತಿಗಳು:-

ನಮ್ಮ ಕೇಂದ್ರವು ನುರಿತ ಸಿಬ್ಬಂದಿ ವರ್ಗದವರನ್ನು ಹೊಂದಿದ್ದು ಫಲಾನುಭವಿಗಳಿಗೆ ದುಷ್ಚಟಗಳಿಂದಾಗುವ ದುಷಪರಿಣಾಮಗಳಿಗೆ ಸಂಬಂಧಪಟ್ಟಂತೆ, ಜೀವನಕ್ಕೆ ಸಂಬಂಧಪಟ್ಟಂತೆ ತರಗತಿಗಳನ್ನು ಮಾಡುವ ಮೂಲಕ ಫಲಾನುಭವಿಗಳ ಮನಃಪರಿವರ್ತನೆ ಮಾಡಲಾಗುತ್ತದೆ.

ಗುಂಪು ಚರ್ಚೆ:-

ಫಲಾನುಭವಿಗಳನ್ನು ಗುಂಪುಗಳನ್ನಾಗಿ ವಿಭಜಿಸಿ ವಿವಿದ ರೀತಿಯ ವಿಷಯUಳÀನ್ನು ತೆಗೆದುಕೊಂಡು ಚರ್ಚೆ ನೆಡೆಸುವ ಮೂಲಕ ಇವರ ಮನಸ್ತಿತಿಯನ್ನು ಅರ್ಥೈಸಿಕೊಳ್ಳುವ ಮೂಲಕ ಇವರಿಗೆ ಚಿಕಿತ್ಸೆ ನೀಡಲಾಗಿತ್ತದೆ.

ಅನಾಮಿಕ ಅಮಲು ರೋಗಿಗಳ ಸಭೆ:-

ನಮ್ಮ ಕೇಂದ್ರದಲ್ಲಿ ಪ್ರತೀ ತಿಂಗಳ 4 ನೇ ಶನಿವಾರದಂದು ಇಗಾಗಲೇ ಪುನರ್ವಸತಿ ಪಡೆದ ಫಲಾನುಭವಿಗಳಿಂದ ಅನಾಮಿಕ ಅಮಲುರೋಗಿಗಳ ಸಭೆಯನ್ನು ನೆಡೆಸಲಾಗುತ್ತದೆ.

ಹೊರಾಂಗಣ & ಒಳಾಂಗಣ ಆಟ:-

ಪಲಾನುಭವಿಗಳಿಗೆ ಹೊರಾಂಗಣ ಮತ್ತು ಒಳಾಂಗಣ ಕ್ರೀಡೆ ಗಳನ್ನು ಏರ್ಪಡಿಸುವ ಮೂಲಕ ಉತ್ಸಾಹವನ್ನು ತುಂಬಲಾಗುತ್ತದೆ.

ಯೋಗ,ಪ್ರಾಣಾಯಾಮ,ಧ್ಯಾನ ಮತ್ತು ವಿಪಸನ:-

ಪಲಾನುಭವಿಗಳಿಗೆ ಯೋಗ,ಪ್ರಾಣಾಯಾಮ,ಧ್ಯಾನ ಮತ್ತು ವಿಪಸನ ಮಾಡಿಸುವ ಮುಖಾಂತರ ಪಲಾನುಭವಿಗಳು ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವಂತೆ ಮಾಡಲಾಗುತ್ತದೆ.

ಮನೊರಂಜನೆ:-

ಪಲಾನುಭವಿಗಳಿಗೆ ಸಾಂಸ್ಕøತಿಕ ಚಟುವಟಿಕೆಗಳನ್ನು ಏರ್ಪಡಿಸುವ ಮೂಲಕ ಪಲಾನುಭವಿಗಳಿಗೆ ಉತ್ಸಾಹ ತುಂಬಲಾಗುತ್ತದೆ.

ವೃತ್ತಿಪರ ತರಭೇತಿ:-

ಪಲಾನುಭವಿಗಳಿಗೆ ಕೌಶಲ್ಯಾಧಾರಿತ ವೃತ್ತಿಪರ ತರಭೇತಿ ನಿಡುವ ಮೂಲಕ ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢವಾಗುವಂತೆ ಮಾಡಲಾಗುತ್ತದೆ.

ಜಾಗೃತಿ ಕಾರ್ಯಕ್ರಮಗಳು:-

ನಮ್ಮ ಕೇಂದ್ರದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮುಖಾಂತರ ಯುವಕರಲ್ಲಿ ,ಜನಸಾಮನ್ಯರಲ್ಲಿ, ಮಾಧಕವಸ್ತುಗಳಿಂದ ಆಗುವ ದುಷ್ಪರಿಣಾಮಗಳಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಅನುಸರಣಾ ಕ್ರಮ:-

ನಮ್ಮ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಪುನರ್ವಸತಿ ಪಡೆದ ಪಲಾನುಭವಿಗಳಿಗೆ ನಮ್ಮ ಕೇಂದ್ರದಲ್ಲಿ ಮತ್ತು ಮನೆ ಭೇಟಿ ಮಾಡುವ ಮೂಲಕ ಪಲಾನುಭವಿಗೆ ಸಂಬಂಧ ಪಟ್ಟಂತೆ ಅನುಸರಣಾ ಕ್ರಮವನ್ನು ಮಾಡಲಾಗುತ್ತದೆ.