ತೊಂದರೆಯಲ್ಲಿರುವ ಮಹಿಳೆ ಮತ್ತು ಬಾಲಕಿಯರಿಗೆ
ದೌರ್ಜನ್ಯ, ಹಿಂಸೆ, ಶೋಷಣೆ,ಆತ್ಯಚಾರ ಹಾಗೂ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆ ಮತ್ತು ಬಾಲಕಿಯರಿಗೆ ಸಂದಿಗ್ಧ ಮತ್ತು ಸಂಕಷ್ಟ ಪರಿಸ್ಥಿತಿಯಲ್ಲಿ ತಾತ್ಕಾಲಿಕ ಆಶ್ರಯ ಮತ್ತು ರಕ್ಷಣೆ ಪುನರ್ ವಸತಿ ಕಲ್ಪಿಸುವ ದೈಯೋದ್ದೇಶವಾಗಿದೆ.
ಸುರಭಿ ಸ್ವಾಧಾರ ಗೃಹ ಯೋಜನೆಗಳು :-
- ಕೌಟುಂಬಿಕ ದೌರ್ಜನ್ಯದಿಂದ ನೊಂದ ಮಹಿಳೆ ಅಥವಾ ಬಾಲಕಿಗೆ ಮನೆಯಲ್ಲಿ ವಾಸ ಮಾಡಲು ಸಾಮಾಜಿಕ ರಕ್ಷಣೆಯ ಕೊರತೆಯಿದ್ದಲ್ಲಿ ಅಥವಾ ತೀವ್ರತರವಾದ ವೈವಾಹಿಕ ಸಮಸ್ಯೆಯಿಂದ ಕಾನೂನಿನ ಮೊರೆ ಹೋಗಿರುವಂತಹ ಮಹಿಳೆ.
- ಲೈಂಗಿಕ ಕಿರುಕುಳಕ್ಕೊಳಗಾಗಿ ಮನೆಯಲ್ಲಿ ಅಥವಾ ಸಮಾಜದಲ್ಲಿ ಹೊಂದಾಣಿಕೆ ಸಮಸ್ಯೆಯನ್ನು ಎದುರಿಸುವ ಮಹಿಳೆ ಅಥವಾ ಬಾಲಕಿ.
- ಅಸಮಪಱಕ ಮಾನಸಿಕ ಹೊಂದಾಣಿಕೆ ಭಾವನಾತ್ಮಕ ಸಮಸ್ಯೆ ಹಾಗೂ ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಮಹಿಳೆ.
- ಕೌಟುಂಬಿಕ ಸಮಸ್ಯೆಯಿಂದಾಗಿ ಮನೆಯಿಂದ ಹೊರಬಂದ ಮಹಿಳೆ ಅಥವಾ ಮಾನಸಿಕ ಮತ್ತು ದೈಹಿಕ ಹಿಂಸೆಗೊಳಗಾಗಿ ರಕ್ಷಣೆ ಮತ್ತು ಮಾನಸಿಕ ಚಿಕಿತ್ಸೆ, ಆಪ್ತ ಸಮಾಲೋಚನೆ, ಕುಟುಂಬ ಮತ್ತು ಆಪ್ತರ ಸಂಆಜದೊಂದಿಗೆ ಪುನರ್ ವಸತಿ ಮತ್ತು ಮರು ಹೊಂದಾಣಿಕೆ ನೆರವು ಕೋರಿ ಬಂದ ಮಹಿಳೆ ಅಥವಾ ಬಾಲಕಿ.
- 18 ರಿಂದ 50 ವರ್ಷ ವಯೋಮಿತಿಯೊಳಗಿನ ಮಹಿಳೆ ಮತ್ತು ಬಾಲಕಿಯರು ಹಾಗೂ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಅಲ್ಪಸಂಖ್ಯಾತರು ಮತ್ತು ಆಶಕ್ತ ಮಹಿಳೆಯರಿಗೆ ಆದ್ಯತೆ.
- ನ್ಯಾಯಾಲಯದಲ್ಲಿರುವ ವ್ಯಾಜ್ಯಗಳಿಗೆ ಹಾಜರಾಗುವ ನಿಮಿತ್ತ ದೂರದ ಊರಿನಿಂದ ತಾತ್ಕಾಲಿಕ ಆಶ್ರಯ ಕೋರಿ ಬಂದ ಮಹಿಳೆಯರು.
ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ಸೇವಾ ಸೌಲಭ್ಯಗಳು
- ವಸತಿ, ಆಹಾರ, ಬಟ್ಟೆ, ಔಷಧಿ ಮತ್ತು ಚಿಕಿತ್ಸೆ
- ಪೋಲಿಸ್ ನೆರವು ಮತ್ತು ರಕ್ಷಣೆ
- ವೃತಿಪರ ತರಬೇತಿ
- ಆಪ್ತ ಸಮಾಲೋಚನೆ ಮತ್ತು ಮಾರ್ಗದರ್ಶನ
- ಉಚಿತ ಕಾನೂನು ಸಲಹೆ ಹಾಗೂ ನೆರವು
- ಮಹಿಳಾ ಸಹಾಯವಾಣಿ
- ವಿವಿಧ ಸಮಸ್ಯೆಗಳಿಗೆ ತ್ವರಿತ ನೆರವು ಸೂಕ್ತ ಪುನವಸತಿ ಮತ್ತು ಅನುಸರಣಾ ಕ್ರಮ