ವಿಕಲಚೇತನ ಉದ್ಯೋಗಸ್ಥ ಮಹಿಳೆಯರ ಹಾಗೂ ಬಾಲಕಿಯರ ವಸತಿ ನಿಲಯ

ಮಾನವ ಸಮಾಜದಲ್ಲಿ ಸೃಷ್ಠಿಯ ವೈಪಲ್ಯದಿಂದ ಆಗುವ ತೊಂದರೆಗಳು/ನೂನ್ಯತೆಗಳು/ವಿಕಲಚೇತನ/ಅಂಗವಿಕಲತೆ ಇಂತಹ ಹಲವಾರು ಸಮಸ್ಯೆಗಳಿಗೆ ಮನುಷ್ಯ ಗೊತ್ತಿದ್ದು ಗೊತ್ತಿಲ್ಲದೆ ಗುರಿಯಾಗುತ್ತಾನೆ ಆಗ ಆ ವ್ಯಕ್ತಿಗಳು ತನ್ನಜೀವನದಲ್ಲಿ ಎಲ್ಲವನ್ನು ಕಳೆದುಕೊಂಡಿರುವ ರೀತಿಯಲ್ಲಿ ಖಿನ್ನತೆಗೆ ಒಳಗಾಗಿ ಜೀವನ ಪರ್ಯಂತ ನೋವನ್ನು ಅನುಭವಿಸುತ್ತಿರುತ್ತಾರೆ. ಇಂತಹ ನೂರಾರು ವ್ಯಕ್ತಿಗಳಿಗೆ ಅನುಕೂಲವಾಗಲೆಂದು ಘನ ಸರ್ಕಾರ ನಿರ್ಧರಿಸಿ ಈ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗಿದೆ.

6ನೇ ತರಗತಿಂದ ಪದವಿವರೆಗೆ ಹಾಗೂ ವಿವಿಧ ತರಬೇತಿ ಪಡೆಡಯುತ್ತಿರುವ ಮತ್ತು ದುಡಿಯುವ ಮಹಿಳೆಯರು ಈ ವಸತಿ ನಿಲಯದ ಸದುಪಯೊಗ ಪಡೆದುಕೋಳ್ಳಬಹುದು.

ದಾಖಲಾತಿ ವಿಧಾನ:

ವಿವಿಧ ಇಲಾಖೆಗಳಿಂದ, ಸಾರ್ವಜನಿಕರಿಂದ, ಸ್ರ್ತಿ ಶಕ್ತಿ ಸಂಘ, ಸ್ವಯಂ ಸೇವಾ ಸಂಸ್ಥೆ, ಸಮಾಜ ಸೇವಕರು, ಕುಟುಂಬದವರಿಂದ ಸ್ನೇಹಿತರ ಮೂಲಕ ದಾಖಲಾಗುತ್ತಾರೆ.

ಸೌಲಭ್ಯ :-

ಮೂಲಭೂತ ಸೌಕರ್ಯಗಳಾದ ಊಟ, ವಸತಿಯೊಂದಿಗೆ ತಾತ್ಕಾಲಿಕ ಆಶ್ರಯ.

  • ಮನ:ಪರಿವರ್ತನೆಗಾಗಿ – ಆಪ್ತಸಮಾಲೋಚನೆ, ಕುಟುಂಬ ಸಮಾಲೋಚನೆ.
  • ಮನೋರಂಜನೆ _ ದೂರದರ್ಶನ ವೀಕ್ಷಣೆ, ಒಳಾಂಗಣ ಕ್ರೀಡೆಗಳು-ಕೇರಂ, ಚೇಸ್, ದಿನಪತಿಕೆಗಳ ಒದುವಿಕೆ, ಯೋಗಾಸನ, ಪ್ರಾರ್ಥನೆ, ಹಾಗೂ ದೂರವಾಣೀ ನೇರವು.
  • ವೃತ್ತಿ ತರಬೇತಿ- ಫಲಾನಿಭವಿಗಳಿಗೆ ಕೇಂದ್ರದಲ್ಲಿಯೆ ವಿವಿಧ ಕೌಶಲ್ಯ ತರಬೇತಿ ನೀಡುವುದು.
  • ವೈದ್ಯಕೀಯ ನೆರವು- ಅನಾರೋಗ್ಯದಿಂದ ಬಳಲುವ ಮಕ್ಕಳಿಗೆ ಕೇಂದ್ರದಲ್ಲಿಯೇ ವೈದ್ಯರ ನೆರವು ಹಾಗೂ ಹೆಚ್ಚಿನ ವೈದ್ಯಕೀಯ ನೆರವಿಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗುವುದು.
  • ಮಾಹಿತಿ - ವಿಕಲಚೇತನರಿಗೆ ಸರ್ಕಾರ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು.
ಈ ಕಾರ್ಯಕ್ರಮದ ಗುರಿ-ಉದ್ದೇಶಗಳು:
  • ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು
  • ವಿಕಲಚೇತನರಲ್ಲಿ ಆತ್ಮಸ್ಥೈರ್ಯತುಂಬುವುದು
  • ವಿಕಲಚೇತನರನ್ನು ಸ್ವಾವಲಂಬಿಗಳಾಗಿ ಬದುಕಲು ಪ್ರೇರೆಪಿಸುವುದು
  • ವಿಕಲಚೇತನರಿಗೆ ಸರ್ಕಾರ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು
  • ವಿಕಲಚೇತನರನ್ನ ವಿದ್ಯಾವಂತರನ್ನಾಗಿಸುವುದು
  • ವಿಕಲಚೇತರನ್ನ ಕ್ರೀಯಾಶಿಲರನ್ನಾಗಿಸುವುದು
  • ವಿಕಲಚೇತನರಿಗೆ ವಿವಿಧ ಉದ್ಯೋಗ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡುವುದು
  • ವಿಕಲಚೇತನರಿಗೆ ತಮ್ಮ ಭವಿಷ್ಯದ ಬಗ್ಗೆ ಅರ್ಥೈಸುವುದು
  • ಅಂಗವಿಕಲರಿಗೆ ಸಮಾಜದಲ್ಲಿ ಬದುಕಲು ದಾರಿ ತೊರಿಸುವುದು
  • ಆತ್ಮವಿಶ್ವಾಸವನ್ನು ಹೆಚ್ಚಿಸಲು ಪ್ರೆರೆಪಿಸುವುದು
ಈ ಯೋಜನೆಗೆ ಮಾರ್ಗದರ್ಶಕರು & ಮೌಲ್ಯಮಾಪನ:-

ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿಗಳು ನಮ್ಮ ಕೇಂದ್ರಕ್ಕೆ ಬೇಟಿ ನೀಡಿ ಪಲಾನುಭವಿಗಳಿಗೆ ನೀಡುವ ಸೌಲಭ್ಯ ಮತ್ತು ದಾಖಲಾತಿಗಳನ್ನ ಪರಿಶೀಲಿಸಿ ಮಾರ್ಗದರ್ಶನ ನೀಡಿರುತ್ತಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಮತ್ತು ಸಹಾಯಕ ನಿರ್ಧೇಶಕರು ವಿಕಲಚೆತನರ ಹಾಗೂ ಹಿರಿಯ ನಾಗರೀಕ ಸಬಲೀಕರಣ ಇಲಾಖೆ ಬೆಂಗಳೂರು ಮತ್ತು ಜಿಲ್ಲಾ ಅಧಿಕಾರಿಗಳು ಭೇಟಿ ನೀಡಿರುತ್ತಾರೆ.