ಸುರಭಿ ಸಮಗ್ರ ವ್ಯಸನಿಗಳ ಪುನರ್ವಸತಿ ಕೇಂದ್ರ , ಕೊಪ್ಪಳ

ಕಿನ್ನಾಳ್ ರೋಡ್, ಕೀರ್ತಿಕಾಲೋನಿ, ಬಾಗ್ಯನಗರ, ಕೊಪ್ಪಳ

ಪೀಠಿಕೆ: “ಆಡು ಮುಟ್ಟದ ಸೊಪ್ಪಿಲ್ಲ ಮದ್ಯಪಾನಕ್ಕೆ ದಾಸನಾಗದ ವ್ಯಕ್ತಿ ಇಲ”್ಲ ಎಂಬ ನಾಣ್ಣುಡಿಯಂತೆ ಆಧುನಿಕ 4ಉ ತಂತ್ರಜ್ಞಾನ ಯುಗದಲ್ಲಿ ಲಕ್ಷಾನು ಲಕ್ಷ ಜೀವಿಗಳಲ್ಲಿ ವಿವೇಕ ಸುಜ್ಞಾನ ಹೊಂದಿರುವ ಮಾನವ ಇಂದು ಜಗತ್ತಿನಾದ್ಯಂತ ಹರಡಿದ ಮದ್ಯಪಾನವೆಂಬ ಸಾಮಾಜೀಕ ಸಮಸ್ಯೆಯ ದುಶ್ಚಟಕ್ಕೆ ದಾಸನಾಗಿದ್ದು. ಮದ್ಯಪಾನ ಸೇವನೆ ಹಿಂದಿನ ಕಾಲದಿಂದಲೂ ಬಂದಿರುವ ರೂಢಿಯಾಗಿದ್ದು ಅದು ಇಂದಿನ ಆಧುನಿಕ ಸಮಾಜದ ವರೆಗೂ ಬಂದು ನಿಂತಿದೆ. ಮದ್ಯಪಾನ ದೂಮಪಾನ ಮಾದಕ ವಸ್ತುಗಳ ಸೇವನೆಯು ಫ್ಯಾಶನ್ ಎಂದು ಭಾವಿಸಿದ ನಾಗರಿಕರು ಅದರಲ್ಲಿ ಯುವಕರು ತಮ್ಮ ಅಮೂಲ್ಯ ಜೀವನವನ್ನು ನಶ್ವರ ಮಾಡಿಕೊಂಡು ಆರ್ಥಿಕ,ಸಮಾಜಿಕ,ನೈತಿಕ,ಅದಃಪತನದಕಡೆಗೆ ಸಾಗುತ್ತಿರುವ ನಾಗರೀಕರಿಗೆ ವಿಶೇಷವಾಗಿ ದೇಶದ ಅತ್ಯಮೂಲ್ಯ ಸಂಪತ್ತಾದ ಯುವಕರಿಗೆ ದುಶ್ಚಟದಿಂದಾಗುವ ದುಷ್ಪರಿನಾಮಗಳ ಬಗ್ಗೆ ಆರೋಗ್ಯಕರ ಮಾರ್ಗದರ್ಶನ, ಮಾಹಿತಿ, ತರಬೇತಿ ನೀಡಿ ಆಪ್ತ ಸಮಾಲೋಚನೆ, ಗುಂಪು ಚರ್ಚೆಯ ಮೂಲಕ ಯುವಕರ ಬದುಕನ್ನು ಪುನರ್‍ನಿರ್ಮಿಸಿಕೊಳ್ಳಲು ಅರಿವು ಮೂಡಿಸಿ ತಮ್ಮ ಅಮೂಲ್ಯ ಜೀವನವನ್ನು ಉಜ್ವಲಗೊಳಿಸಿಕೊಳ್ಳಲು ಕುಟುಂಬ ಮತ್ತು ಸಮಾಜವನ್ನು ಕೊಂಡಿಯಂತೆ ಜೋಡಿಸುವ ಕಾರ್ಯಕ್ರಮದ ಒಂದು ಸಂಸ್ಥೆಯೇ ಸುರಭಿ ಸಮಗ್ರ ವ್ಯಸನಿಗಳ ಪುನರ್ವಸತಿ ಕೇಂದ್ರ

  1. ಮದ್ಯಪಾನ ಎಂದರೆ- ಪರಸ್ಪರ ಸಂಬಂಧಗಳಲ್ಲಿ ಶರೀರ,ಮನಸ್ಸು, ಹಾಗೂ ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುವುದೆಂಬ ಅರಿವಿದ್ದರು ಮತ್ತೆ ಮತ್ತೆ ಮದ್ಯಪಾನ ಮಾಡುವಂತೆ ವ್ಯಕ್ತಿಯನ್ನು ಪ್ರೆರೇಪಿಸುವ ಸ್ಥಿತಿಯನ್ನು ಮದ್ಯಪಾನ ಅಥವಾ ಅಲ್ಕೋಹಾಲ್ ಅಬ್ಯೂಸ್ ಎಂದು ಹೇಳಬಹುದು.

  2. ಸುರಭಿ ವ್ಯಸನ ಮುಕ್ತಿ ಕೇಂದ್ರದ ಗುರಿ ಮತ್ತು ಉದ್ದೇಶಗಳು:-
    • ಕುಟುಂಬದ ಸದಸ್ಯರ ಮೇಲೆ ಮುಖ್ಯವಾಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯದಂತೆ ತಿಳುವಳಿಕೆ ಮೂಡಿಸುವುದು.
    • ಮಕ್ಕಳು, ಕುಟುಂಬದ ಸದಸ್ಯರು, ಯುವಕರು, ಕುಡಿತಕ್ಕೆ ಹಾಗೂ ಇತರ ದುಶ್ಚಟಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸುವುದು.
    • ದುಶ್ಚಟಕ್ಕೆ ಒಳಗಾದ ವ್ಯಕ್ತಿ ದೈಹಿಕ, ಮಾನಸಿಕ, ರೋಗಗಳಿಗೆ ಹಾಗೂ ಆತ್ಮಹತ್ಯೆಗೆ ಒಳಗಾಗದಂತೆ ಪ್ರೆರೇಪಿಸುವುದು.
    • ವ್ಯಸನಕ್ಕೆ ದಾಸನಾದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಹಾಗೂ ಮಕ್ಕಳು ಮತ್ತು ಹಿರಿಯ ಪ್ರತಿಬೆಗಳು ನಾಶವಾಗದಂತೆ ಹಾಗೂ ಉದ್ಯೋಗವಕಾಶಗಳು ಕೈತಪ್ಪದಂತೆ ಅರಿವು ಮೂಡಿಸುವುದು.
    • ವ್ಯಸನಕ್ಕೆ ದಾಸರಾದ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು.
    • ದುಷ್ಚಟಕ್ಕೆ ಒಳಗಾಗುವ ವ್ಯಕ್ತಿಗಳಿಂದ ಜಗಳ ಕಳ್ಳತನ ಇತರ ಅನೈತಿಕ ಚಟುವಟಿಕೆಗಳು ಆರಂಭವಾಗಿ ಗ್ರಾಮದ ಶಾಂತಿಗೆ ಬಂಗತರದಂತೆ ಜಾಗೃತಿ ಮೂಡಿಸುವುದು.
    • ಸಮಾಜದಲ್ಲಿ ವ್ಯಸನಿಗಳ ಗೌರವಕ್ಕೆ ದಕ್ಕೆಬರದಂತೆ ಅರಿವು ಮೂಡಿಸುವುದು.
    • ಕ್ಷುಲ್ಲಕ ಕ್ಷಣಿಕ ಸಂತೋಷಕ್ಕಾಗಿ ದಾಸರಾಗುವದನ್ನ ನಿಯಂತ್ರಿಸುವುದು.

  3. ವ್ಯಸನಿಗಳ ಅಯ್ಕೆ ಪ್ರಕ್ರಿಯೆ
    • ವ್ಯಸನಿಗಳ ಸ್ವ ಇಚ್ಚೆಗೆ ಅಣುಗುಣವಾಗಿ
    • ವೈದ್ಯರ ತಪಾಸಣೆ ಆದಾರದ ಮೂಲಕ
    • ವ್ಯಸನಿಯ ಮನವೊಲಿಸುವದರ ಮೂಲಕ
    • ಸ್ನೇಹಿತರು ಹಾಗೂ ಕುಟುಂಬದವರ ಮೂಲಕ
    • ಸಮಾಜಕಾರ್ಯಕರ್ತರು,ಉದ್ಯೋಗಿ,ಹಾಗೂ ಮಾದ್ಯಮದವರ ಮೂಲಕ
    • ಚೇತರಿಸಿಕೊಂಡ ವ್ಯಸನಿಗಳ ಮೂಲಕ
    • ವ್ಯಸನಿಯ ಆಧಾರಕಾರ್ಡ/ಮತದಾರರ ಗುರುತಿನ ಚೀಟಿ/ರೇಷನ್ ಕಾರ್ಡ
    • ವ್ಯಸನಿಯ ಎರಡು ಇತ್ತಿಚಿನ ಭಾವಚಿತ್ರ
    • ವ್ಯಸನಿಯ ಸಂಬಂಧಿಕರ ಸಹಿ

  4. ಸಂಸ್ಥೆಯಲ್ಲಿ ದೊರೆಯುವ ಸೌಲಭ್ಯಗಳು:
    • ಸುಸಜ್ಜಿತ ವಸತಿ ಮತ್ತು ಪೌಷ್ಟಿಕ ಆಹಾರ
    • ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ [ರಕ್ತ ಪರೀಕ್ಷೆ]
    • ವೈಯಕ್ತಿಕ ಆಪ್ತ ಸಮಾಲೋಚನೆ
    • ಕೌಟುಂಬಿಕ ಆಪ್ತ ಸಮಾಲೋಚನೆ
    • ಗುಂಪು ಚರ್ಚೆ
    • ಮೌಲ್ಯ ಶಿಕ್ಷಣ
      1. ವೈಯಕ್ತಿಕ ಪರಿಣಾಮ
      2. ಕೋಪ ನಿರ್ವಹಣೆ
      3. ಔದ್ಯೋಗಿಕ ಹಾನಿ
      4. ಗಂಭೀರ ಜೀವನ
      5. ಕುಟುಂಬದ ಮೇಲೆ ಪರಿಣಾಮ
      6. ಒತ್ತಡ ನಿರ್ವಹಣೆ
      7. ಜೀವನದ ಗುಣಮಟ್ಟ
      8. ಹಣಕಾಸು ನಿರ್ವಹಣೆ
      9. ಮಾನವೀಯ ಮೌಲ್ಯಗಳು
      10. ಸ್ವಯಂ ಗೌರವ
    • ವ್ಯಸನಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಮಾಹಿತಿ ಮತ್ತು ಮಾರ್ಗದರ್ಶನ
    • ಮನರಂಜನೆ ಕಾರ್ಯಕ್ರಮ, ಆಟೋಟಗಳು ಹಾಗೂ ಗ್ರಥಾಲಯ ವ್ಯವಸ್ಥೆ

  5. ವ್ಯಸನಿಗಳ ಅನುಸರಣೆ:
    • ದೂರವಾಣಿ
    • ಪತ್ರದ ಮೂಲಕ
    • ಮನೆ ಭೇಟಿ

  6. ಮೆಲ್ವಿಚಾರಣೆ ಮತ್ತು ಮೌಲ್ಯಮಾಪನ: ಈ ವ್ಯಸನ ಮುಕ್ತಿ ಕೇಂದ್ರವನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕರು ಮೇಲ್ವಿಚಾರಣೆ ಮಾಡುತ್ತಾರೆ. ರಾಜ್ಯ ಮಟ್ಟದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ನಿರ್ದೇಶಕರು ಮೇಲ್ವಿಚಾರಣೆ ಮಾಡುತ್ತಾರೆ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚೀವಾಲಯದ ಅಧೀನ ಕಾರ್ಯದರ್ಶೀಗಳು ಮೇಲ್ವಿಚಾರಣೆ ಮಾಡುತ್ತಾರೆ. ಪ್ರಾಂತಿಯ ಸಂಪನ್ಮೂಲ ತರಬೇತಿ ಕೇಂದ್ರ ದವರು ಮೌಲ್ಯಮಾಪನ ಮಾಡುತ್ತಾರೆ.